ಬೆಂಗಳೂರು:- ಮಿಚುವಾಂಗ್ ಚಂಡಮಾರುತದ ಎಫೆಕ್ಟ್ ಚೆನ್ನೈ ಮೇಲೆ ಜೋರಾಗಿ ಕಂಡು ಬಂದಿದೆ. ಇಡೀ ಚೆನ್ನೈ ಜಲಾವೃತವಾಗಿದೆ. ಇನ್ನು ಮಿಚುವಾಂಗ್ ಎಫೆಕ್ಟ್, ರಾಜ್ಯ ರಾಜಧಾನಿಯಲ್ಲೂ ಕಂಡು ಬಂದಿದೆ. ಚಂಡ ಮಾರುತದ ಪರಿಣಾಮವಾಗಿ ಮೋಡ ಕವಿದ ವಾತಾವರಣವಿದೆ. ಅಲ್ಲದೆ ಚಳಿ ಕೂಡಾ ಹೆಚ್ಚಾಗಿದೆ. ಚುಮು ಚುಮು ಚಳಿಗೆ ಬೆಂಗಳೂರಿನ ಜನ ನಡುಗುವಂತಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಧಾನಿ ಬೆಂಗಳೂರು ಸೇರಿ ಸುತ್ತಲಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.