ಬೆಂಗಳೂರು/ಬೆಳಗಾವಿ:- ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆಂಬ ಸಿಎಂ ಹೇಳಿಕೆಗೆ ಹೆಚ್ ಡಿಕೆ ಟಾಂಗ್ ಕೊಟ್ಟಿದ್ದಾರೆ ಇದು ಓಲೈಕೆ ಅಲ್ಲದೇ ಬೇರೇನು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದು, ನಾಡಿನ ಸಿಎಂ ಆಗಿ ರಾಜ್ಯದ ಸರ್ವತೋಮುಖ ಜನರ ಅಭಿವೃದ್ಧಿ ಮಾಡಬೇಕು.
ಒಂದು ಸಮಾಜವನ್ನು ಓಲೈಕೆ ಮಾಡೋದಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿದ್ದಾರೆ. ‘ರಾಜ್ಯದ ಎಲ್ಲ ಜನರ ಬದುಕು ಕಟ್ಟಲು ಈ ಸರ್ಕಾರ ಇರಬೇಕು. ಕಳೆದ ಬಜೆಟ್ನಲ್ಲಿ ಇವರೆಷ್ಟು ಹಣ ಇಟ್ಟಿದ್ದರು ಅದನ್ನು ಮೊದಲು ಕೊಡಲಿ. ಬಳಿಕ ಮುಂದಿನ ವರ್ಷ 10 ಸಾವಿರ ಕೋಟಿ ಕೊಡಲಿ ಎಂದರು.
ಇನ್ನೂ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ, ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.