ಬೆಂಗಳೂರು:- ಸೈಟ್ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿರುವ ವಿದೇಶಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅನಿವಾಸಿ ಭಾರತೀಯ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಜಾಹಿರಾತು ಮುಖಾಂತರ ರಾಘವೇಂದ್ರ ಪ್ರಸಾದ್ ಎಂಬವರನ್ನು ಜೆಪಿ ನಗರದ ರಿಯಲ್ ಎಸ್ಟೇಟ್ ಕಂಪನಿ ಪರಿಚಯಿಸಿಕೊಂಡಿದೆ. ನಂತರ ಹೂಡಿಕೆ ಮಾಡಿಸಿಕೊಂಡು ಸೈಟ್ ಬುಕ್ ಮಾಡಿದ್ದಾರೆ. ಈಗಾಗಲೇ ವಿವಿಧ ಹಂತಗಳಲ್ಲಿ 30 ಲಕ್ಷ ಹಣ ಜಮೆ ಮಾಡಿಸಿಕೊಂಡಿದೆ. ಹಣ ಜಮೆಯಾದ ಬಳಿಕ ಬುಕ್ ಮಾಡಿದ್ದ ಸೈಟ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ.
ಈ ವಿಚಾರ ತಿಳಿದ ರಾಘವೇಂದ್ರ ಪ್ರಸಾದ್ ಅವರು ಕಂಪನಿಯನ್ನು ಪ್ರಶ್ನಿಸಿದಾಗ ಬೇರೆ ಸೈಟ್ ನೀಡುವುದಾಗಿ ತಿಳಿಸಿದೆ. ಈ ವೇಳೆ ಹೂಡಿಕೆ ಹಣ ವಾಪಾಸ್ ನೀಡುವಂತೆ ರಾಘವೇಂದ್ರ ಅವರು ಕಂಪನಿಗೆ ಮನವಿ ಮಾಡಿದ್ದಾರೆ.