ಬೆಂಗಳೂರು: ಈ ಬಿಬಿಎಂಪಿ ಅಧಿಕಾರಿಗಳ ದರ್ಪ, ಅಧಿಕಾರ ಏನಿದ್ರೂ, ಕೇವಲ ಬಡ ಜನರ ಅಮಾಯಕರ ಮೇಲೆ ಮಾತ್ರ. ನಗರದ ದೊಡ್ಡ ದೊಡ್ಡ ಉದ್ಯಮಿಗಳು ಉಳ್ಳವರ ಮುಂದಾಗಲಿ ಪಾಲಿಕೆ ಅಧಿಕಾರಿಗಳ ಆಟ ಏನು ನೆಡೆಯುವುದಿಲ್ಲ ಅಂತ ಇದೀಗ ಮತ್ತೊಮ್ಮೆ ಸಾಬೀತಾಗಿದೆ.ಏನು ಅಂತೀರಾ ಈ ಸ್ಟೋರಿ ನೋಡಿ. ಬಿಬಿಎಂಪಿಯ ಕೆಲ ಅಧಿಕಾರಿಗಳು ಯಾವ ಕೆಲಸ ಮಾಡಲು ಇದ್ದರೋ ಗೊತ್ತಾಗ್ತಿಲ್ಲ,
ಯಾಕಂದ್ರೆ ನಗರದಲ್ಲಿ ರಾಜಾ ರೋಷಾವಾಗಿ ಎಲ್ಲಾರೆದುರು ಜಾಹಿರಾತು ಪ್ರದರ್ಶನ ಮಾಡುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಿಂದ ಸುಮಾರು ಹತ್ತು ವರ್ಷಗಳಿಂದ ನಾಯಾಪೈಸೆ ಕೂಡ ಕಲೆಕ್ಟ ಮಾಡಿಲ್ವಂತೆ.ಹಾಗಾದ್ರೆ ಬಿಬಿಎಂಪಿಗೆ ಹತ್ತು ವರ್ಷಗಳಿಂದ ಶುಲ್ಕ ಕಟ್ಟದೇ ನೂರಾರು ಕೋಟಿ ವಂಚನೆ ಮಾಡಿರುವುದಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ KSCA ವಂಚನೆ ಮಾಡಿರೋದು ಬಯಲಿಗೆ ಬಂದಿದೆ.
ಇನ್ನೂ ಪ್ರತಿ ಪಂದ್ಯಾ ನಡೆಯುವಾಗ ವಿವಿಧ ಸಂಸ್ಥೆಗಳು ಬ್ರ್ಯಾಂಡ್ ಗಳ ಜಾಹೀರಾತು ಪ್ರದರ್ಶನ ಮಾಡಿ ಎಂದು KSCA ಗೆ ಸಾವಿರಾರು ಕೋಟಿ ರೂಪಾಯಿ ಜಾಹೀರಾತು ಶುಲ್ಕ ಎಂದು ಕೋಟಿ ಕೋಟಿ ಸಂಗ್ರಹ ಮಾಡಿರುತ್ತಾರೆ. ಆದರೆ KSCA ಮಾತ್ರ ಪಾಲಿಕೆಗೆ ನಯಾ ಪೈಸೆ ಶುಲ್ಕ ಕಟ್ಟಿಲ್ಲ. ಆದ್ರೆ ಪಾಲಿಕೆ ಅಧಿಕಾರಿಗಳು ಮಾತ್ರ ಶುಲ್ಕ ವಸೂಲಿ ಮಾಡಲು ಮುಂದಾಗಿಲ್ಲ ಜೊತೆಗೆ, ಒಂದು ನೋಟಿಸ್ ಕೂಡಾ ನೀಡಿಲ್ಲ,
ಆದ್ರೆ ಇದೀಗ ಪಾಲಿಕೆ ಅಧಿಕಾರಿಗಳಿಗೂ ಕ್ರಿಕೆಟ್ ಅಸೋಸಿಯೇಷನ್ ನವರಿಗೂ ಒಳ ಒಪ್ಪಂದ ಆಗಿದ್ಯಾ ಅಂತಾ ಅನುಮಾನ ಕೂಡ ವ್ಯಕ್ತವಾಗುತ್ತಿದೆ,ಯಾಕಂದ್ರೆ ಇವತ್ತು, ಮನೆ ಕಂದಾಯ ಕಟ್ಟದಿದ್ದರೆ ಮನೆ ಮುಂದೆ ಬಂದು ನಿಲ್ಲೋ ಬಿಬಿಎಂಪಿ ಅಧಿಕಾರಿಗಳು. ಕಳೆದ ಹತ್ತು ವರ್ಷಗಳಿಂದ ಶುಲ್ಕ ವಸೂಲಿಗೆ ಒಂದು ನೋಟಿಸ್ ನೀಡಿಲ್ಲ ಅಂತಾ ಪಾಲಿಕೆ ವಿರುದ್ದ ಸಾಮಾಜಿಕ ಕಾರ್ಯಕರ್ತ ಅಮರೇಶ್ ಗುಡುಗಿದ್ದಾರೆ. ಒಟ್ನಲ್ಲಿ ಪಾಲಿಕೆ ಜನರಿಗೊಂದು,ಉದ್ಯಮಿಗಳಿಗೊಂದು ನ್ಯಾಯ ಮಾಡದೇ ತಕ್ಷಣ ಬಿಬಿಎಂಪಿ ಅಧಿಕಾರಿಗಳು KSCA ಮೇಲೆ ಕ್ರಮ ಕೈ ಗೊಳ್ಳಬೇಕಾಗಿದೆ.