ಬೆಂಗಳೂರು :- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಮ್ ರಾಜ್ಯಕ್ಕೆ ತುಂಬಾ ನೋವಾಗಿದೆ. 600 ಚಿತ್ರಗಳಲ್ಲಿ ಮಹಾತಾಯಿ ಲೀಲಾವತಿ ನಟಿಸಿದ್ದಾರೆ. ನಾನು 40 ವರ್ಷದಿಂದ ನೋಡಿದ್ದೀನಿ. ಥಿಯೇಟರ್ ಬಗ್ಗೆ ಚರ್ಚೆ ಮಾಡ್ತಿದ್ವಿ. ಕೊನೆ ಭೇಟಿಯಲ್ಲಿ ನನ್ ಮನೆಗೆ ಬಂದಿದ್ರು.
ಪಶುವೈದ್ಯಶಾಲೆ ಕಟ್ಟಿ ನನ್ನನ್ನ ಕರೆದ್ರು. ಅದೃಷ್ಟ ಬದಲಾಗುತ್ತೆ, ನಿರ್ಧಾರ ಅಲ್ಲ..! ಅವರು ನನ್ನನ್ನ ಕರೆದ್ದಿದ್ದೆ ನನ್ ಅದೃಷ್ಟ. ಪಶುವೈದ್ಯಶಾಲೆ ಉದ್ಘಾಟನೆ ನನ್ ಭಾಗ್ಯ. ಅವರೇ ವ್ಯವಸಾಯ ಮಾಡ್ತಿದ್ರು. ಮನೆ ನಾಯಿ ಊಟ ಮಾಡಿಲ್ಲ ಅಂತ ಕೇಳಿ ಬೇಜಾರಾಯ್ತು. ಅವರ ಆದರ್ಶಗಳನ್ನ ನಾವು ಅನುಸರಿಸ್ಬೇಕು. ಸ್ಮಾರಕ ಬಗ್ಗೆ ನಾನು,ಸಿಎಂ ಚರ್ಚೆ ಮಾಡ್ತೀವಿ ಎಂದು ಹೇಳಿದ್ದಾರೆ.