ಬೆಂಗಳೂರು: ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಆರೋಪದಡಿ ದೂರು ದಾಖಲಾಗಿದೆ.
ಡಾ.ವೆಂಕಟೇಶಯ್ಯ ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ನಕಲಿ ಲೆಟರ್ ಹೆಡರ್ ಸೃಷ್ಟಿಸಿ ಸಿಎಂ ಕಚೇರಿಯಿಂದ ಲೋಕೋಪಯೋಗಿ ಸಚಿವರಿಗೆ ಕಡತವೊಂದನ್ನು ಕಳುಹಿಸಲಾಗಿದೆ. ಈ ಕಡತದಲ್ಲಿ ರಾಜೇಂದ್ರ ಹೆಸರಿನಲ್ಲಿ ಸಹಿ ಹಾಕಲಾಗಿದ್ದು, ಅಂಕಿತ್ ಎಂಬಾತನಿಗೆ ಇಲಾಖೆಯಲ್ಲಿ ತಾತ್ಕಾಲಿಕ ಕೆಲಸ ನೀಡುವಂತೆ ಉಲ್ಲೇಖಿಸಲಾಗಿದೆ.
ಆದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ರಾಜೇಂದ್ರ ಎಂಬ ವ್ಯಕ್ತಿಯೇ ಇಲ್ಲ. ಈ ಹಿನ್ನೆಲೆ ಸಿಎಂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.