ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲ್ಲೂಕಿನ ಮೋಪರಹಳ್ಳಿಯ ಜನ, ಜಾನುವಾರುಗಳು, ಶಾಲಾಮಕ್ಕಳು ಸುಗಮವಾಗಿ ಚಲಿಸಲು ಅಂಡರ್ ಪಾಸ್ ಬೇಕು ಎಂದು ಮೋಪರಹಳ್ಳಿಯ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸಕೋಟೆ – ದಾಬಸ್ ಪೇಟೆ ರಸ್ತೆಯನ್ನು ಅಗಲೀಕರಣ ಮಾಡುತ್ತಿದ್ದು, ರಸ್ತೆಯ ಕಾಮಗಾರಿಯು ಮೋಪರಹಳ್ಳಿಯಲ್ಲಿ ಮಾರ್ಗವಾಗಿ ಹಾದುಹೋಗುತ್ತಿದೆ. ಈ ಗ್ರಾಮದಲ್ಲಿರುವ ಶಾಲಾ ಮಕ್ಕಳು ಶಾಲೆಗೆ ಬರಲು ಮತ್ತು ಹೋಗಲು ರೈತರು, ಜನ ಜಾನುವಾರುಗಳು ಪಕ್ಕದ ಜಮೀನುಗಳಿಗೆ ಹೋಗಿಬರಲು ಕಷ್ಟವಾಗುತ್ತಿದೆ, ಅಲ್ಲದೆ ಈ ರಸ್ತೆಯಲ್ಲಿ ಅಪಘಾತಗಳು ಆಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಂಡರ್ ಪಾಸ್ ರಸ್ತೆಯನ್ನು ಮಾಡಿಸಿ ಶಾಲಾ ಮಕ್ಕಳಿಗೆ, ರೈತರಿಗೆ, ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೋಪರಹಳ್ಳಿ ಗ್ರಾಮಸ್ಥರು ಹೇಳಿದರು
ಈ ಸಂದರ್ಭದಲ್ಲಿ ಮೋಪರಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಎಂ.ಪಿ ನಾಗರಾಜ್, ಮುನಿಆಂಜಿನಪ್ಪ, ಸುರೇಶ, ವೆಂಕಟೇಶ್, ರಾಮಪ್ಪ, ಹನುಮಂತಗೌಡ, ರಾಮಾಂಜಿನಪ್ಪ, ಆನಂದ, ಮುನಿರಾಜ, ನಾಗೇಶ, ಚನ್ನಕೃಷ್ಣ, ಮಾರಪ್ಪ, ಮುರಳಿ ಎಂ,ಹನುಮಂತಗೌಡ,ರಾಮಾಂಜಿನಪ್ಪ, ಗಂಗರಾಜ, ರಮೇಶ, ನಾರಾಯಣಪ್ಪ. ಮುನಿಆಂಜಿನಪ್ಪ, ಆಂಜಿನಪ್ಪ, ರಮೇಶ್, ಹನುಮರಾಜ, ಹರೀಶ, ರಾಮಾಂಜಿನಪ್ಪ, ಮತ್ತಿತರರು ಹಾಜರಿದ್ದರು.