ಮಾನವ ಹಕ್ಕುಗಳು ಗೌರವಿಸುವುದು ಎಲ್ಲರ ಕರ್ತವ್ಯ:- ಸಂಜಯ ಗುದಗುಡಿ.
ಧಾರವಾಡ ೧೨ ಜಗತ್ತಿನಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಗೌರವ, ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ವೈಯಕ್ತಿಕ ಹಕ್ಕಿನ ಪ್ರತಿಪಾದನೆಯ ಜತೆಜತೆಯಲ್ಲಿ ಇತರರ ಹಕ್ಕನ್ನು ಗೌರವಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಶ್ರೀ. ಸಂಜಯ್ ಪಿ. ಗುದಗುಡಿ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ, ನಗರದ ಅಂಜುಮನ್ ಕಾಲೇಜ್ ಪದವಿ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನಚಾರಣೆ ಅಂಗವಾಗಿ ಹಮ್ಮಿಕೂಂಡ್ಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ವರ್ಗ, ಲಿಂಗ, ಮತ, ಧರ್ಮ, ಶ್ರೀಮಂತ, ಬಡವ ಎನ್ನುವ ಭೇದಭಾವ ಇಲ್ಲದೇ ಭೂಮಿಯ ಮೇಲಿನ ಎಲ್ಲ ಮಾನವರು ಸಮಾನರು ಮತ್ತು ಎಲ್ಲರಿಗೂ ಮೂಲಭೂತ ಹಕ್ಕುಗಳಿವೆ ಎಂಬುದನ್ನು ಸಾರಿ ಹೇಳುವುದೇ ವಿಶ್ವ ಮಾನವ ಹಕ್ಕುಗಳ ದಿನಾ ಚರಣೆಯ ಪ್ರಮುಖ ಉದ್ದೇಶ ಎಂದರು.
ಮಾತ ಅಂಜುಮನ್-ಇ-ಇಸ್ಲಾA ಅಧ್ಯಕ್ಷರು ಶ್ರಿ.ಇಕ್ಬಾಲ್ ಕೆ. ಜಮಾದಾರ ನಂತರ ನಾಡಿದ ಮಾನವ ಹಕ್ಕುಗಳ ದಿನದಂದು ಪ್ರತಿಯೊಬ್ಬ ವ್ಯಕ್ತಿಗೂ ಮಾನವ ಹಕ್ಕುಗಳ ಮೂಲಭೂತ ಪ್ರಾಮುಖ್ಯತೆಯನ್ನು ಪ್ರತಿ ಬಿಂಬಿಸೋಣ ಮತ್ತು ಎಲ್ಲರಿಗೂ ನ್ಯಾಯ, ಸಮಾನತೆ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ಅನುಸರಿಸಲು ಅವಕಾಶವನ್ನು ಕಲ್ಪಿಸುವ ಪಣ ತೊಡೋಣ ಎಂದರು .
ಡಾ.ಎನ್.ಎಮ್.ಮಕಾನದಾರ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಮತ್ತು ಜನರಲ್ಲಿ ಮಾನವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಡಿ.೧೦ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೊ. ನಾಗರಾಜ್ ಕನಕಣಿ ನೋಡಲ್ ಅಧಿಕಾರಿ ಡಾ.ಎನ್.ವಿ. ಗುದಗನವರ್ ಪತ್ರಿಕೂದ್ಯಮದ ಮುಖ್ಯಸ್ಥ ಎಸ್ ಎಸ್ ಅದೋನಿ ಆಯ್.ಕ್ಯೂ.ಎ.ಸಿ ಡಾ.ಎನ್.ಬಿ ನಾಲತವಾಡ ಡಾ.ಎಪ್.ಎಚ್.ನದಾಫ ಡಾ ಎಸ್ ಕೆ ಜಾಧವ್ ಇತರ ವಿಭಾಗದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಸನ್: ಸಸಿ ನೀರಿನೆಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ