ಬೆಂಗಳೂರು: ಏಳನೇ ದಿನದ ವಿಧಾನಸಭೆ ಕಲಾಪ ಸದ್ದುಗದ್ದಲದಲ್ಲೇ ಕೊನೆಯಾಯ್ತು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಯಾಯ್ತು.ಯತ್ನಾಳ್,ಜೆ.ಟಿ.ಪಾಟೀಲ್ ಸೇರಿದಂತೆ ಹಲವರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ರು. ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣವೂ ಸದ್ದುಮಾಡ್ತು.. ಭ್ರೂಣಹತ್ಯೆಯ ಪ್ರಸ್ತಾಪವೂ ಆಯ್ತು.. ಪ್ರಶ್ನೋತ್ತರದ ವೇಳೆ ಹಲವರು ತಮ್ಮ ಕ್ಷೇತ್ರಗಳ ಸಮಸ್ಗೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಂಡ್ರು.
ಕುಂದನಗರಿಯಲ್ಲಿ ಅರಂಭವಾಗಿರೋ ಚಳಿಗಾಲದ ಅಧಿವೇಶನದ ಮೊದಲ ದಿನವೇ ಉತ್ತರದ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡಲಾಯಿತು.ಆದ್ರೆ ಕೆಲವೊಂದು ವಿಷಯಗಳ ಸದ್ದುಗದ್ದಲದಲ್ಲಿ ಸದನ ಕದನವಾಗಿತ್ತು. ಆದ್ರೆ ಎರಡನೇ ವಾರದ ಎರಡನೇ ದಿನ ಇದೀಗ ಉತ್ತರದ ಕಡೆ ಕೊನೆಗೂ ಸದನ ಬಂತು.ಇಂದು ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆಯಾಯಿತು.
ಇನ್ನು ಉತ್ತರ ಕರ್ನಾಟಕದ ಚರ್ಚೆ ಮೊದಲಾವಧಿಯ ವೇಳೆ ಡಿಸಿಎಂ ಡಿಕೆಶಿಯನ್ನ ಯತ್ನಾಳ್ ಲೇವಡಿ ಮಾಡಿದ ಪ್ರಸಂಗಕ್ಕೆ ಸದನ ಸಾಕ್ಷಿಯಾಯ್ತು.ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗ್ತಿಲ್ಲ, ಹಳೆ ಮೈಸೂರು ಭಾಗ ಮಾತ್ರ ಅಭಿವೃದ್ಧಿಯಾಗ್ತಿದೆ.ಅದಕ್ಕೆ ಮೈಸೂರು ಮಹಾರಾಜರು ಕಾರಣ.ಹಾಗೆ ಕನಕಪುರವೂ ಅಭಿವೃದ್ಧಿಯಾಗಿಲ್ಲ. ಅಲ್ಲಿರುವ ಶಾಸಕರ ಆದಾಯ ಮಾತ್ರ ವರ್ಷವರ್ಷವೂ ಹೆಚ್ಚಾಗ್ತಿದೆ. ೫೦ ಕೋಟಿಯಿಂದ ೧೦೦ ಕೋಟಿ,೧೫೮೩ ಕೋಟಿವರೆಗೆ ಬಂದಿದೆ.. ಇನ್ನೂ ಆದಾಯ ಹೆಚ್ಚುತ್ತಲೇ ಇದೆ.. ಆದ್ರೆ ಕನಕಪುರದ ಅಭಿವೃದ್ಧಿ ಮಾತ್ರ ಕುಂಠಿತವಾಗ್ತಿದೆ ಅಂತ ಡಿಕೆಶಿಯನ್ನ ಪರೋಕ್ಷವಾಗಿ ಕುಟುಕಿದ್ರು.. ಇನ್ನು ಸುವರ್ಣಸೌಧಕ್ಕೆ ಲೈಟಿಂಗ್,ಫೌಂಟೇನ್ ಹಾಕೋದ್ರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲ್ಲ.. ಹತ್ತು ದಿನಗಳ ಕಾಟಾಚಾರದ ಸದನದಿಂದ ಪ್ರಯೋಜನವಿಲ್ಲ.. ಈ ಭಾಗದಲ್ಲಿ ಕಚೇರಿಗಳನ್ನ ಪ್ರಾರಂಭಿಸಿ, ಹೆಚ್ಚಿನ ಅನುದಾನವನ್ನ ಒದಗಿಸಿ ಅಂತ ಸರ್ಕಾರಕ್ಕೆ ಒತ್ತಾಯಿಸಿದ್ರು.
ಉತ್ತರ ಕರ್ನಾಟಕದ ಚರ್ಚೆ ವೇಳೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ಧನ ರೆಡ್ಡಿ ಪದೇ ಪದೇ ಬಳ್ಳಾರಿ ಜಿಲ್ಲೆಯ ಬಗ್ಗೆ ಪ್ರಸ್ತಾಪ ಮಾಡಿದ್ರು.. ಬಳ್ಳಾರಿಗೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕು.. ಹಂಪಿ, ಅನೆಗೊಂದಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತೆ, ಇದ್ರಿಂದ ಆದಾಯವೂ ಹೆಚ್ಚಲಿದೆ ಅಂತ ಸಲಹೆ ನೀಡಿದ್ರು.. ಹುಬ್ಬಳ್ಳಿ ವಿಮಾನ ನಿಲ್ದಾಣವಾಗೋಕೆ ನನ್ನ ಸಹಕಾರವಿದೆ.. ಅದೇ ರೀತಿ ಮೈನಿಂಗ್ ಟ್ಯಾಕ್ಸ್ ನಿಂದ ೨೪ ಸಾವಿರ ಕೋಟಿ ಇದ್ದು ಅದನ್ನ ಬಳ್ಳಾರಿ ಅಭಿವೃದ್ಧಿಗೆ ಬಳಸಿ,ವಿಮಾನ ನಿಲ್ದಾಣ ಪ್ರಾರಂಭಿಸಿ ಅದಕ್ಕೆ ಹನುಮಾನ್ ನಿಲ್ದಾಣವೆಂದು ಹೆಸರಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಇನ್ನು ಬಳ್ಳಾರಿ ನಗರ ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ನಗರ ಕ್ಷೇತ್ರದ ಮಾಜಿ ಶಾಸಕ ಜರ್ನಾದನ ರೆಡ್ಡಿ ಹಾಗು ಹಾಲಿ ಶಾಸಕ ಭರತ್ ರೆಡ್ಡಿ ನಡುವೆ ನಾನಾ.ನೀನಾ ಎಂದು ಏಕವಚನ ದಲ್ಲಿ ಬೈಯ್ದಡುಕೊಂಡ್ರು.
ಬೆಳಗಾವಿಯ ವಂಟಮೂರಿ ಮಹಿಳೆಯ ವಿವಸ್ತ್ರ ಪ್ರಕರಣ ಸದನದ ಗಮನಸೆಳೆಯಿತು..ವಿಷಯವನ್ನ ಪ್ರಸ್ತಾಪಿಸಿ ಸುನೀಲ್ ಕುಮಾರ್ ಹಾಗೂ ಶಶಿಕಲಾ ಜೊಲ್ಲೆ ಇದೊಂದು ಅಮಾನವೀಯ ಕೃತ್ಯ..ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮಡೆಯಬಾರದು ಅಂತ ಆಕ್ರೋಶ ಹೊರಹಾಕಿದ್ರು.. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನ ಕೊಡಬೇಕು.. ಯಾವುದೇ ಕಾರಣಕ್ಕು ಅವರಿಗೆ ಬೇಲ್ ಸಿಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ರು.. ಈ ವೇಳೆ ಪ್ರಕರಣದ ಬಗ್ಗೆ ವಿವರಣೆ ನೀಡಿದ ಗೃಹ ಸಚಿವ ಪರಮೇಶ್ವರ್,ಇದನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆಂದು ಸ್ಪಷ್ಟನೆ ನೀಡಿದ್ರು.. ಪ್ರಕರಣದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿದವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.. ಆರೋಪಿಗಳನ್ನ ಬಂಧಿಸಿದ್ದೇವೆ.. ಅದೇ ರೀತಿ ಓಡಿಹೋದ ಹುಡಗಹುಡುಗಿಯನ್ನಹುಡುಕುವ ಪ್ರಯತ್ನ ನಡೆದಿದೆ ಅಂತ ಉತ್ತರ ಕೊಟ್ರು.
ಇನ್ನು ಪ್ರಶ್ನೋತ್ತರದ ವೇಳೆ ಬೆಂಗಳೂರಿನ ಅಕ್ರಮ ಹುಕ್ಕಾಬಾರ್ ಗಳ ಬಗ್ಗೆ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಸ್ತಾಪಿಸಿದ್ರು.. ಕೋರಮಂಗಲದಲ್ಲಿ ಅಕ್ರಮ ನೂರಾರು ಹುಕ್ಕಾಬಾರ್ ಗಳಿವೆ.. ಒಂದು ಬಾರ್ ನಲ್ಲಿ ಸಿಲಿಂಡರ್ ಸ್ಪೋಟದಿಂದ ಅನಾಹುತ ನಡೆದಿದೆ.. ಸರ್ಕಾರ ಇದ್ರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ರು..ಈ ವೇಳೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್,ಫುಡ್ ಸೇಫ್ಟೀ ಅಥಾರಿಟಿ ಆಫ್ ಇಂಡಿಯಾ ಅಡಿಯಲ್ಲಿ ಹುಕ್ಕಾಬಾರ್ ಲೈಸೆನ್ಸ್ ತೆಗೆದುಕೊಳ್ತಾರೆ.. ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಕೊಡುವುದಿಲ್ಲ.. ಲೈಸೆನ್ಸ್ ಅಗತ್ಯ ಇಲ್ಲವೆಂದು ಕೋರ್ಟ್ ಕೂಡ ಹೇಳಿದೆ ,ಆದರೆ ನಿಯಮ ಉಲ್ಲಂಘಿಸಿದರೆ ಕಡಿವಾಣ ಹಾಕುವ ಅಧಿಕಾರ ಪೊಲೀಸ್ ಇಲಾಖೆಗಿದೆ ಹಾಗಾಗಿ ಸೂಕ್ತ ಕಾನೂನುತರುತ್ತೇವೆಂದಿದ್ದಾರೆ..
ಒಟ್ಟಾರೆ, ಉತ್ತರ ಕರ್ನಾಟಕ ಸಮಸ್ಯೆಗಳ ಮೇಲೆ ಇಂದು ಕೆಳ್ಮನೆಯಲ್ಲಿ ಚರ್ಚೆ ನಡೀತು.ಉತ್ತರ ಕರ್ನಾಟಕ ಸಮಸ್ಯೆಗಳ ಇನ್ನಾದರೂ ಬಗೆಹರಿಯುತ್ತಾ ಅಥವಾ ಚರ್ಚೆಗೆ ಸೀಮಿತವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.