ಬೆಂಗಳೂರು:- ಕೆಎಸ್ಎಟಿ ಕಲಾಪ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶಿಸಿ ದುಷ್ಕೃತ್ಯ ಎಸಗಲಾಗಿದೆ. ಘಟನೆ ಬಗ್ಗೆ ಕೆಎಸ್ಎಟಿಯ ಅಧಿಕಾರಿ ಬೆಂಗಳೂರಿನ ಸೆಂಟ್ರಲ್ ಸೆನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ವೇಳೆ ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೋ ಪ್ರದರ್ಶನ ಮಾಡಿದ ಅನಾಮಧೇಯ ವ್ಯಕ್ಯಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಧಿಕಾರಿಗಳು ಆನ್ಲೈನ್ ಕಲಾಪ ಸ್ಥಗಿತಗೊಳಿಸಿದರು.
ಈ ಬಗ್ಗೆ ಐಟಿ ಕಾಯ್ದೆ ಸೆಕ್ಷನ್ 67, 67a ಅಡಿ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೋ ಪ್ರದರ್ಶಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾರದ ಹಿಂದೆ ಕರ್ನಾಟಕ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪದ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಘಟನೆ ನಡೆದಿತ್ತು. ಇದೀಗ ಮತ್ತೆ ಅಂತಹ ಘಟನೆ ನಡೆದಿದೆ.