ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲೆಕ್ಕಕ್ಕೆ ಸಿಗ್ತಿಲ್ಲ ಶೇ 35 ರಷ್ಟು ಕಾವೇರಿ ನೀರು. ಬೆಂಗಳೂರು ಜಲ ಮಂಡಳಿ ಅನಧಿಕೃತ ಸಂಪರ್ಕ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಸನ್ನದ್ಧ ಆಗಿದ್ದು, ಇನ್ಮೇಲೆ ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ದಂಡ ಅಲ್ಲ,ಕಾನೂನು ಕ್ರಮ…
ಬೆಂಗಳೂರಿನಲ್ಲಿ ಕಾವೇರಿ ನೀರು ಕಳ್ಳರಿಗೆ ಮತ್ತೊಂದು ಶಾಕ್ ಸಿಗಲಿದೆ.ಯಾಕೆಂದರೆ ಬೆಂಗಳೂರಿನಲ್ಲಿ 12ಲಕ್ಷಕ್ಕೂ ಹೆಚ್ಚಿನ ಕಾವೇರಿ ನೀರಿನ ಸಂಪರ್ಕಗಳಿದ್ದು,ಶೇಕಡಾ 35ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ.ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಶಿಕ್ಷಾರ್ಹ ಅಪರಾಧವಾಗಿದ್ರೂ,ಕಾವೇರಿ ನೀರನ್ನ ಕಳ್ಳತನ ಮಾಡ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿ ಸಾವಿರಾರು ಮಂದಿ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ.ಅನಧಿಕೃತ ಸಂಪರ್ಕಗಳ ಪತ್ತೆಗೆ ವಿಶೇಷ ತಂಡ ರಚನೆ ಇದ್ರೂ ಕೇವಲ ದಂಡಕ್ಕೆ ಮಾತ್ರ ಸೀಮಿತವಾಗಿದೆ. ಇಷ್ಟು ದಿನ ಜಲಮಂಡಳಿ ಇಂಜಿನಿಯರ್ಸ್ ದಂಡ ಹಾಕಿ ಸೈಲೆಂಟ್ ಆಗ್ತಿದ್ರು.ಈಗ ಅನಧಿಕೃತ ನೀರಿನ ಸಂಪರ್ಕ ಪಡೆದವರ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಜಲಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಬರಗಾಲವಿದ್ದು.ಹೀಗಿರುವಾಗ ಕಾವೇರಿ ನೀರನ್ನು ಅನಧಿಕೃತವಾಗಿ ಬಳಸುತ್ತಿರುವುದು ನಾಚಿಕೆಯ ಸಂಗತಿ.ಇನ್ನಾದರೂ ಜಲಮಂಡಳಿ ಎಚ್ಚೆತ್ತು ಸರಿಯಾದ ಕ್ರಮ ತೆಗೆದುಕೊಳ್ಳುವತ್ತ ಗಮನಹರಿಸಬೇಕಿದೆ.