ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ದಿನ ನಿತ್ಯ ಬಳಕೆಯ ಪದಾರ್ಥಗಳ ಬೆಲೆಗಳು ಏರುತ್ತಲೆ ಇವೆ. ಮೊದಲು ಈರುಳ್ಳಿ ಬೆಲೆಯ ಏರಿಕೆಯ ಹೊಡೆತದಿಂದ ಗ್ರಾಹಕರು ರಿಲ್ಯಾಕ್ಸ್ ಆಗುವ ಹೊತ್ತಿಗೆಯೇ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿತ್ತು. ಸದ್ಯ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿಯ ಬೆಲೆ ಏರಿಕೆಯ ಹೊಡೆತ ಬಿದ್ದಿದೆ.
ಸದ್ಯ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ ಇದರ ಪರಿಣಾಮ ಕೆಲವು ಬೆಳೆಗಳ ಮೇಲೆ ಪರಿಣಾಮ ಬೀರಿರುವದರಿಂದ ಇಳುವರಿ ಕುಂಠಿತಗೊಂಡ ಪೂರೈಕೆ ಕಡಿಮೆಯಾದ ಕಾರಣ ಬೆಲೆ ಏರಿಕೆಯಾಗುವುದು ಸಹಜ ಪ್ರಕ್ರಿಯೇ. ಆದರೆ ಬೆಳ್ಳುಳ್ಳಿಯ ವಿಷಯದಲ್ಲಿ ಪ್ರತಿವರ್ಷ ಡಿಸೆಂಬರ್ ಅಂತ್ಯಕ್ಕೆ ಕೆಲವು ಹವಾಮಾನ ಹಾಗೂ ಋತುಮಾನದ ಕಾರಣಗಳಿಂದ, ಪೂರೈಕೆಯಲ್ಲಿ ಕಡಿಮೆಯಾಗಿ ಬೆಲೆಯಲ್ಲಿ ಏರಿಳಿತ ಕಾಣುತಿತ್ತು, ಆದರೆ ಈ ವರ್ಷ ಡಿಸೆಂಬರ್ ಆಗಮನಕ್ಕೂ ಮುನ್ನವೆ ಬೆಳ್ಳುಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಪರಿಣಾಮ ಕೇವಲ ಐದೇ ಐದು ವಾರದಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ.
ಇಷ್ಟು ದಿನಗಳ ಕಾಲ ನಾಸಿಕ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿತ್ತು ಆದ್ರೆ ನಾಸಿಕ್ ಮತ್ತು ಪುನಾದಿಂದ ಬರುವ ಆಮದು ಕಡಿಮೆಯಾಗಿದ್ದು, ಸಧ್ಯ ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಾಲಾಗುತ್ತಿದ್ದು ಸಾಗಾಣೆ ವೆಚ್ಚವನ್ನ ಹೇರಿಕೆ ಮಾಡುತ್ತಿದ್ದಾರೆ ಅಲ್ಲದೇ ಈ ಹಿಂದೆ 25 ರಿಂದ 30 ಚೀಲ ಲಾರಿಗಳಲ್ಲಿ ಮಾಲೂ ಪೂರೈಕೆಯಾಗುತ್ತಿತ್ತು ಆದ್ರೆ ಇದೀಗಾ 9 ರಿಂದ 10 ಲೋಡ್ ಗಳು ಬರುವುದು ಕಷ್ಟವಾಗಿರುವ ಕಾರಣ ಬೆಳ್ಳುಳ್ಳಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಬೆಳ್ಳುಳ್ಳು ಖರೀದಿ ಮಾಡ್ಬೇಕು ಅಂದ್ರೆ ಒಮ್ಮೆ ಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಸೈಲೆಂಟ್ ಆಗಿಯೇ ಮತ್ತೆ ಏರಿಕೆಯಾಗುತ್ತಿದೆ ಈರುಳ್ಳಿ ಇಂದಿನ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 50 ರುಪಾಯಿ ಮುಂದಿನ ದಿನದಲ್ಲಿ ಮತ್ತೆ ಏರಿಕೆಯಾಗಲಿದೆ ಅಂತಿರೋ ವ್ಯಾಪಾರಸ್ಥರು