ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ಪಡೆಯದೆ ಪ್ರಯಾಣ ಮಾಡಿದವರಿಗೆ ಬಿತ್ತು ದಂಡ. ಮಹಿಳಾ ಮೀಸಲು ಸೀಟ್ ನಲ್ಲಿ ಕೂತವರ ಜೇಬಿಗೆ ಬಿತ್ತು ಕತ್ತರಿ. ದಂಡದಿಂದಲೆ ಬಿಎಂಟಿಸಿ ಬೊಕ್ಕಸಕ್ಕೆ ಬಂದ ಹಣವೆಷ್ಟು ಗೊತ್ತಾ? ಇಲ್ಲಿದೆ ಡೀಟೈಲ್ಸ್
ಟಿಕೆಟ್ ಪಡೆಯದೆ ಪ್ರಯಾಣ ಮಾಡ್ತಿದ್ದವರಿಗೆ ಬಿಎಂಟಿಸಿ ಶಾಕ್ ನೀಡಿದೆ. ನವೆಂಬರ್ ತಿಂಗಳಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 6.68.610 ದಂಡ ವಸೂಲಿ ಮಾಡಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್ ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ ಬಿದ್ದಿದೆ.16,421 ಟ್ರಿಪ್ ಗಳಲ್ಲಿ ತಪಾಸಣೆ ಮಾಡಿದ್ದ ಚೆಕ್ಕಿಂಗ್ ಇನ್ಸ್ಪೆಕ್ಟರ್ ಗಳು,3,329 ಮಂದಿ ಟಿಕೇಟ್ ರಹಿತ ಪ್ರಯಾಣ ಮಾಡಿದ ಪ್ರಯಾಣಿಕರನ್ನು ಪತ್ತೆ ಮಾಡಿದ್ದಾರೆ.
ಮಹಿಳಾ ಸೀಟ್ ನಲ್ಲಿ ಕುಳಿತ ಪ್ರಯಾಣಿಕರಿಂದ 43800ರೂ ದಂಡ ವಸೂಲಿ ಮಾಡಿದ್ದಾರೆ.ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಹಾಗೂ94 ರ ಅನ್ವಯದಂತೆ ದಂಡ ವಿಧಿಸಲಾಗಿದ್ದು,ನವೆಂಬರ್ ತಿಂಗಳಲ್ಲಿ ಬಿಎಂಟಿಸಿಯ ಬೊಕ್ಕಸಕ್ಕೆ ಒಟ್ಟು 7,12,410 ರೂಪಾಯಿ ಹಣ ಬಂದಿದೆ.
ಇಷ್ಟೇ ಅಲ್ಲದೇ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದ 1,062 ನಿರ್ವಾಹಕರ ವಿರುದ್ಧವೂ ನಿಗಮ ದಂಡಾಸ್ತ್ರ ಪ್ರಯೋಗಮಾಡಿದೆ.. ಒಟ್ಟಿನಲ್ಲಿ ಇನ್ನೂ ಮುಂದೆ ಆದರು ಪ್ರಯಾಣಿಕರು ಹಾಗೂ ನಿರ್ವಾಹಕರು ಜವಾಬ್ದಾರಿಯಿಂದ ವರ್ತಿಸಬೇಕಿದೆ.