ಸೇಡಂ ಪಟ್ಟಣದಲ್ಲಿ ಕರುವಿಗೆ ತೊಟ್ಟಿಲಲ್ಲಿ ಕೂರಿಸಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ನಡೆಯಿತು. ಅಪರೂಪವಷ್ಟೇ ಅಲ್ಲ ಬಹುಶ ಇದು ವಿಶಿಷ್ಟ ಕಾರ್ಯಕ್ರಮ ಅಂದ್ರೂ ತಪ್ಪಾಗಲಿಕ್ಕಿಲ್ಲ..
ಪಟ್ಟಣದ ನವನೀತ ಗೋಶಾಲೆಯಲ್ಲಿ ಮುದ್ದಾದ ಕರುವಿಗೆ ತೊಟ್ಟಿಲಲ್ಲಿ ಕೂರಿಸಿ ತುಳಸಿ ಅಂತ ನಾಮಕರಣ ಮಾಡಲಾಯಿತು.ಥೇಟ್ ಕೂಸಿಗೆ ಮಾಡುವ ತೊಟ್ಟಿಲ ಕಾರ್ಯಕ್ರಮ ತರ ಮುದ್ದಾದ ಕರುವನ್ನ ಸಿಂಗರಿಸಿದ ತೊಟ್ಟಿಲಲ್ಲಿ ಹಾಕಿ ಬಡಾವಣೆಯ ಜನರೆಲ್ಲ ಸೇರಿ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು..