ಬೆಂಗಳೂರು: ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಇದೇ ಹೊತ್ತಲ್ಲಿ ಸಂತ್ರಸ್ತೆಯ ಭೇಟಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ರಾಜಕಾರಣಿಗಳು ಸೇರಿ ಯಾರೇ ಆಗಲಿ ವೈದ್ಯರ ಲಿಖಿತ ಅನುಮತಿ ಇಲ್ಲದೇ ಸಂತ್ರಸ್ತೆಯನ್ನು ಭೇಟಿ ಮಾಡುವಂತಿಲ್ಲ. ಇದು ಕುಟುಂಬಸ್ಥರು, ಶಾಸನಬದ್ಧ ಸಂಸ್ಥೆ, ತನಿಖಾಧಿಕಾರಿಗಳಿಗೆ ಅನ್ವಯಿಸಲ್ಲ. ಹೀಗಾಗಿ ವೈದ್ಯರು, ಕುಟುಂಬಸ್ಥರು ಹಾಗೂ ತನಿಖಾಧಿಕಾರಿಗಳು ಮಾತ್ರ ಭೇಟಿ ಮಾಡಬಹುದು ಎಂದು ಸಿಜೆ ವರಾಳೆ ನೇತೃತ್ವದ ವಿಭಾಗೀಯ ಪೀಠ ಆದೇಶ ನೀಡಿದೆ.
ಪ್ರಕರಣ ಸಂಬಂಧ ಶುಕ್ರವಾರ ದೆಹಲಿಯಲ್ಲಿ ದನಿ ಎತ್ತಿದ್ದ ಬಿಜೆಪಿಗರು ಶನಿವಾರ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಸಂಸದೆ ಅಪರಾಜಿತಾ ಸಿಂಗ್ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರು ಸಂತ್ರಸ್ತೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು. ಘಟನೆಯ ಬಗ್ಗೆ ಮಾಹಿತಿ ಪಡೆದ್ರು. ಘಟನಾ ಸ್ಥಳಕ್ಕೂ ತೆರಳಿ ಪರಿಶೀಲಿಸಿದ್ರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಬೆಳಗಾವಿಲಿದ್ರೂ ಸಿಎಂ ಸೇರಿ ಯಾರು ಕೂಡ ಸಂತ್ರಸ್ತೆಯನ್ನು ಏಕೆ ಭೇಟಿ ಮಾಡ್ಲಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.