2023ರ ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದೆ.ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಕಾತುರರಾಗಿರೋ ಹೊತ್ತಲ್ಲೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೂಡ ನ್ಯೂ ಇಯರ್ ಸೆಲೆಬ್ರೇಷನ್ ನಲ್ಲಿ ಲೋಪವಾಗದಂತೆ ತಡೆಯೋಕೆ ಪ್ಲಾನ್ ನಡೆಸಿದೆ. ಈಗಾಗಲೇ ಜಂಟಿ ಸಭೆ ನಡೆಸಿರೋ ಪಾಲಿಕೆ ಹಾಗೂ ಪೊಲೀಸರು, ಹೊಸ ವರ್ಷಾಚರಣೆಯ ರೂಪುರೇಷೆಗಳನ್ನ ರೆಡಿಮಾಡ್ತಿದ್ದಾರೆ.ಹೊಸ ವರ್ಷಕ್ಕೆ ಏನೆಲ್ಲಾ ರೂಲ್ಸ್ ಇರುತ್ತೆ ಅನ್ನೋದರ ರಿಪೋರ್ಟ್ ಇಲ್ಲಿದೆ..
ಹೊಸ ವರ್ಷಕ್ಕೆ ಇನ್ನೇನು 12 ದಿನಗಳು ಬಾಕಿ ಉಳಿದಿವೆ. 2023ಕ್ಕೆ ಟಾಟಾ ಹೇಳಿ 2024ನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಕಾತುರದಲ್ಲಿ ಜನರಿದ್ದಾರೆ. ಹೊಸ ವರ್ಷದಂದು ನಗರದಾದ್ಯಂತ ಸಂಭ್ರಮ ಮನೆ ಮಾಡಲಿದೆ. ಈ ಕುರಿತಾಗಿ ಮತ್ತು ಮುನ್ನೆಚ್ಚರಿಕೆಯ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ ಪೊಲೀಸರ ಸಾರಥ್ಯದಲ್ಲಿ ಗೈಡ್ ಲೈನ್ಸ್ ರೆಡಿ ಮಾಡಿದೆ.
ಹೌದು.ಡಿಸೆಂಬರ್ ತಿಂಗಳು ಮುಗಿಯುತ್ತ ಬರ್ತಿದ್ದಂತೆ ಇತ್ತ ಹೊಸ ವರ್ಷದ ತಯಾರಿ ಕೂಡ ಸದ್ದಿಲ್ಲದೇ ಕಾವೇರುತ್ತಿದೆ. ಹೊಸ ವರ್ಷಾಚರಣೆಗೆ ಇನ್ನೂ 15 ದಿನ ಇರುವಾಗಲೇ ಬೆಂಗಳೂರಿನ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೈಡ್ ಲೈನ್ ಬಗ್ಗೆ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರೋ ಪಾಲಿಕೆ ಈ ಬಾರಿ ನ್ಯೂ ಇಯರ್ ಗೆ ಕೆಲವೊಂದು ರೂಲ್ಸ್ ಗಳನ್ನ ಜಾರಿಗೆ ತರಲು ಸಜ್ಜಾಗಿದೆ
ಬೈಟ್: ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು, ಬಿಬಿಎಂಪಿ
ಇನ್ನು ಈ ಬಾರೀ ಬೆಂಗಳೂರಿನ ನ್ಯೂ ಇಯರ್ ಹಾಟ್ ಸ್ಪಾಟ್ ಆಗಿರೋ ಎಂ.ಜಿ.ರೋಡ್,ಬ್ರಿಗೇಡ್ ರೋಡ್ ಗಳಲ್ಲಿ ಸಿಸಿಟಿವಿ ಸಂಖ್ಯೆಯನ್ನ ಕೂಡ ಹೆಚ್ಚಿಸೋಕೆ ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ. ಕಳೆದ 3 ವರ್ಷಗಳಿಂದ ಕೋವಿಡ್ ಇದ್ದ ಹಿನ್ನೆಲೆ ಕೇವಲ 200 ರಿಂದ 300ಸಿಸಿಟಿವಿ ಅಳವಡಿಕೆ ಮಾಡಲಾಗ್ತಿತ್ತು, ಆದ್ರೆ ಈ ಬಾರೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರೋದರಿಂದ ಸುಮಾರು 800 ಸಿಸಿಟಿವಿ ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಇನ್ನೂ ಹಲವು ರೂಲ್ಸ್ ಗಳನ್ನ ಕೂಡ ರೆಡಿಮಾಡಲಾಗಿದ್ದು , ಏನೆಲ್ಲಾ ರೂಲ್ಸ್ ಇರಲಿದೆ ಅನ್ನೋದನ್ನ ನೋಡೋದಾದ್ರೆ