ಕ್ರಿಸ್ಮಸ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಸ್ಮಸ್ ಸಂಭ್ರಮಾಚರಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಬಗೆಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಲು ಸಿದ್ಧತೆಗಳು ಆರಂಭಗೊಂಡಿದೆ. ಈ ಬಾರಿ ಕ್ರಿಸ್ಮಸ್ಗೆ ವಿವಿಧ ಬಗೆಯ ಕೇಕ್ಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ರೆಡ್ ವೆಲ್ವೆಟ್ ಕೇಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ ನೋಡಿ!
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – ಕಾಲು ಕಪ್
ಉಪ್ಪು – ಅರ್ಧ ಚಮಚ
ಸಕ್ಕರೆ – 1 ಕಪ್
ಎಣ್ಣೆ – 1 ಕಪ್
ಕಲರ್ ಪೌಡರ್ – ಅರ್ಧ ಚಮಚ
ಅಡುಗೆ ಸೋಡಾ – ಅರ್ಧ ಚಮಚ
ಕೋಕೋ ಪೌಡರ್ – 1 ಚಮಚ
ಮೊಟ್ಟೆ – 1
ಮಜ್ಜಿಗೆ – ಅರ್ಧ ಕಪ್
ವೆನಿಲ್ಲಾ ಸಾರಾ – 1 ಚಮಚ
ಕ್ರೀಮ್ ಚೀಸ್ – ಅರ್ಧ ಕಪ್
ಸಣ್ಣದಾಗಿ ಹೆಚ್ಚಿದ ಬಾದಾಮಿ – 1 ಚಮಚ
ಬೆಣ್ಣೆ – ಕಾಲು ಕಪ್
ಹೆಚ್ಚಿದ ಗೋಡಂಬಿ – 1 ಚಮಚ
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ನಲ್ಲಿ ಗೋಧಿ ಹಿಟ್ಟು, ಅಡುಗೆ ಸೋಡಾ, ಕೋಕೋ ಪೌಡರ್ ಮತ್ತು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಸಕ್ಕರೆ ಮತ್ತು ಮೊಟ್ಟೆಯನ್ನು ಹಾಕಿಕೊಂಡು ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಈ ಮಿಶ್ರಣಕ್ಕೆ ಮಜ್ಜಿಗೆ, ವೆನಿಲ್ಲಾ ಸಾರಾ ಮತ್ತು ರೆಡ್ ಕಲರ್ ಪೌಡರ್ ಸೇರಿಸಿಕೊಂಡು ಮತ್ತೊಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಕೇಕ್ ಪ್ಯಾನ್ಗೆ ಹಾಕಿಕೊಂಡು 30ರಿಂದ 40 ನಿಮಿಷಗಳ ಕಾಲ ಓವನ್ನಲ್ಲಿ ಬೇಯಿಸಿಕೊಳ್ಳಿ.
* ನಂತರ ಕೇಕ್ ತಣ್ಣಗಾಗಲು ಬಿಡಿ. ಬಳಿಕ ಕೇಕ್ ಮೇಲೆ ಕ್ರೀಮ್ ಚೀಸ್ ಮತ್ತು ಬೆಣ್ಣೆಯನ್ನು ಹರಡಿಕೊಂಡು ಅದರ ಮೇಲೆ ಹೆಚ್ಚಿದ ಗೋಡಂಬಿ ಹಾಗೂ ಬಾದಾಮಿಯನ್ನು ಹಾಕಿಕೊಳ್ಳಿ.
* ಈಗ ನಿಮ್ಮ ಕ್ರಿಸ್ಮಸ್ ಕೇಕ್ ಸವಿಯಲು ಸಿದ್ಧ.