ಬೆಂಗಳೂರು: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ವಿಶೇಷ ಅಂದ್ರೆ ಅದು ಈಗಾಗಲೇ ಬಂದು ಹೋಗಿದೆ. ಕಾರವಾರದ ಸದಾಶಿವಗಡದ ಯುವಕರೊಬ್ಬರಲ್ಲಿ 15 ದಿನಗಳ ಹಿಂದೆ ಈ ಸೋಂಕು ಪತ್ತೆಯಾಗಿತ್ತು. ಲಸಿಕೆ ಪಡೆದ ಎರಡ್ಮೂರು ದಿನಗಳಲ್ಲಿ ಆತ ಚೇತರಿಸಿಕೊಂಡಿದ್ದಾನೆ. ಈಗ ಆರ್ ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋವಿಡ್ ಮೀಟಿಂಗ್ ಏರ್ಪಾಡಿಸಿದ್ದು ನಾಳೆ ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ ಮುಂದಿನ ಹಂತದ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.