ಬೆಂಗಳೂರು: ಮನೆ ಮುಂದೆ ಆಟವಾಡ್ತಿದ್ದ ವೇಳೆ ಆಯಾತಪ್ಪಿ ಸಂಪ್ ಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆನ್ನೆ ಸಂಜೆ ನಡೆದಿರೋ ಘಟನೆಯಾಗಿದ್ದು ಆಯಿದಾ (5) ವರ್ಷ ಮೃತಪಟ್ಟ ಮಗುವಾಗಿದೆ.
ನೀರು ಸಂಪ್ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದ ಬಾಡಿಗೆದಾರರು ಈ ವೇಳೆ ಮಗು ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದ ತಾಯಿ ತುಂಬಾ ಸಮಯದ ಬಳಿಕ ಮಗು ನೋಡಲು ಬಂದಾಗ ಸಂಪ್ ನಲ್ಲಿ ಬಿದ್ದಿದ್ದ ಮಗು ಮೃತಪಟ್ಟಿದೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೇಸ್ ಮುಂದುವರೆದಿದೆ.