ಬೆಂಗಳೂರು : ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕೋದು. ಗೋಮಾಳ , ಕೆರೆ ಜಾಗ ಕಬಳಿಸೋದು ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ಹೊಸದೇನು ಅಲ್ಲ. ಆದ್ರೆ ಇಲ್ಲೊಂದು ಗ್ಯಾಂಗ್ ದೇಶ ಆಸ್ತಿಯಾಗಿರೋ ಹೆಚ್ ಎ ಎಲ್ ಜಾಗಕ್ಕೆ ಕಣ್ಣಾಕಿ ಬಿಟ್ಟಿದೆ. ಹೆಚ್ ಎ ಎಲ್ ನ ಖಾಲಿ ಜಾಗವನ್ನ ತೋರಿಸಿ ಮಾರಟಾಕ್ಕಿದೆ ಅಂತ ಕೋಟಿ ಕೋಟಿ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಅದು ಹೆಚ್ ಎ ಎಲ್ ಜಾಗ ಮಾರಾಟ ಮಾಡಲು ಹೊರಟಿದ್ದು ಮೈನಾರಿಟಿ ಸಂಘದ ಅಧ್ಯಕ್ಷ ಅಂತೆ.
ಸರ್ಕಾರಿ ಜಾಗ ಸೇಲ್ ಗಿಟ್ಟು ಕೋಟಿ ಕೋಟಿ ಡೀಲ್ ಮಾಡಿದ್ದ ಕರ್ನಾಟಕ ಮೈನಾರಿಟಿ ಕಮಿಷನ್ ಅಧ್ಯಕ್ಷ ಬಿನಿಷ್ ಥಾಮಸ್ ಅಂಡ್ ಟೀಮ್ ವಿರುದ್ಧ ಹೆಚ್ ಎಎಲ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಸರ್ಕಾರಿ ಜಮೀನು ತೋರಿಸಿ ಜಾಯಿಂಟ್ ವೆಂಚರ್ ನಲ್ಲಿ ಬಿಜಿನೆಸ್ ಮಾತುಕತೆ ಮಾಡಿ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ಜೈನ್ ಗೆ ಕೋಟಿ ಕೋಟಿ ವಂಚಿಸಿದ್ಸಾರೆಂದು ದೂರು ದಾಖಲಾಗಿದೆ. ಮೈನಾರಿಟಿ ಸಂಘದ ಅಧ್ಯಕ್ಷ ಬಿನಿಷ್ ಥಾಮಸ್ ಅಂಡ್ ಗ್ಯಾಂಗ್
ಹೆಚ್ ಎ ಎಲ್ ಜಾಗವನ್ನು ಲೀಜ್ ಗೆ ಕೋಡಿಸೋದಾಗಿ ಹೇಳಿ ಸುರೇಶ್ ಜೈನ್ ಜೊತೆ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಹೆಚ್ ಎ ಎಲ್ ಲೆಟರ್ ಹೆಡ್ ನಲ್ಲಿ ಜಮೀನನ್ಮ ಲೀಜ್ ಗೆ ಕೊಡೋದಾಗಿ ಪ್ರಕಟಣೆ ಹೊರಡಿಸಿರೋ ರೀತಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇದಾದ ನಂತರ ಸುರೇಶ್ ಜೈನ್ ಗೆ ನಂಬಿಕೆ ಬರಲು ಆರೋಪಿ ಮುನ್ನಾವರ್ ಜೊತೆಗೆ ಕೆಲವರನ್ನ ತೋರಿಸಿ ಹೆಚ್ ಎ ಡಲ್ ಅಧಿಕಾರಿ ಎಂದು ಪರಿಚಯ ಮಾಡಿಸಿದ್ದಾರೆ.
ಇನ್ನೂ ಜಾಗ ಕೊಡಿಸಿದರೆ ಕಮೀಷನ್ ಕೊಡಬೇಕೆಂದು ಅಡ್ವಾನ್ಸ್ ಕೂಡ ಪಡೆದಿದ್ದ ಉದ್ಯಮಿ ಸುರೇಶ್ ಜೈನ್ಬ ಚೆಕ್ , ಆನ್ ಲೈನ್ ಮೂಲಕ 19 ಕೋಟಿ ಹಾಕಿದ್ರಂತೆ ಸುಮಾರು 18 ಜನರ ಗ್ಯಾಂಗ್ ಮಾಡಿಕೊಂಡು ಉದ್ಯಮಿಗಳಿಗೆ ಪಂಗನಾಮ ಹಾಕಿದ್ದು ಸಲೀಂ, ಚೆಲುವರಾಜು, ರಾಜಶೇಖರ. ದೀಪಕ್ ರೈ, ಇನ್ನಿತರನ್ನ ಹೆಚ್ ಎ ಎಲ್ ಸಿಬ್ಬಂದಿ ಅಂತ ಸೀನ್ ಕ್ರಿಯೇಟ್ ಮಾಡಿದ್ರಂತೆ. 30 ರಿಂದ 40 ವರ್ಷಗಳಿಗೆ ಜಮೀನುಬಲೀಜ್ ಗೆ ಕೊಡಿಸೋದಾಗಿ ಡೀಲ್ ಮಾಡಿದ್ದು, ಬಿನಿಷ್ ಥಾಮಸ್ ಉದ್ಯಮಿಯನ್ನ ಹಲವು ಬಾರಿ ಕರೆಸಿಕೊಂಡು ಮೀಟಿಂಗ್ ಮಾಡಿ ಬಿಲ್ಡಪ್ ಕೊಟ್ಟಿದ್ನಂತೆ.
ಇನ್ನೂ ಈ ನಕಲಿ ಜಾಲ ಹೆಚ್ ಎ ಎಲ್ ಗಮನಕ್ಕೂ ಈ ಹಿಂದೆಯೇ ಬಂದಿದ್ದು ಹೆಚ್ ಎ ಎಲ್ ಅಧಿಕಾರಿಗಳು ಈ ಹಿಂದೆ ಹೆಚ್ ಎ ಎಲ್ ಲೆಟರ್ ಹೆಡ್ ನಕಲಿ ಮಾಡಿ ಹೆಸರು ದುರ್ಬಳಕೆ ಮಾಡಿದ ಹಿನ್ನೆಲೆ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ಕಳೆದ ಆಗಸ್ಟ್ ನಲ್ಲಿ ಉದ್ಯಮಿ ಸುರೇಶ್ ಜೈನ್ ಕೂಡ ವಂಚನೆ ಕುರಿತು ಬಿನಿಷ್ ಥಾಮಸ್ ಸೇರಿ 18ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.