ಬೆಂಗಳೂರು:- ಪೊಲೀಸ್ ಕಾನ್ಸ್ಟೆಬಲ್ಗೆ ಬೆಂಕಿ ಹಚ್ಚಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಡಿಸೆಂಬರ್ 6ರಂದು ಕಾನ್ಸ್ಟೆಬಲ್ಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಬಂದಿತ್ತು. ಅಡುಗೆ ಮಾಡಬೇಕಾದರೆ ಅನಿಲ ಸೋರಿಕೆಯಾಗಿ ಬೆಂಕಿ ವ್ಯಾಪಿಸಿದ್ದರಿಂದ ಸುಟ್ಟುಗಾಯವಾಗಿದೆ ಎಂದು ಆರಂಭದಲ್ಲಿ ಸಂಜಯ್ ಹೇಳಿಕೆ ನೀಡಿದ್ದರು. ಕಳೆದ ಎರಡು ದಿವಸದ ಹಿಂದೆ ತಮ್ಮ ಹೇಳಿಕೆ ಬದಲಿಸಿ ಪರಿಚಯಸ್ಥ ಮಹಿಳೆಯೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದ್ದರು. ಸದ್ಯ ಆಕೆಯನ್ನು ವಶ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.