ವಾಷಿಂಗ್ಟನ್: ಅಲಬಾಮಾದ 32 ವರ್ಷದ ಮಹಿಳೆ ಈಗ ಎರಡು ಗರ್ಭಾಶಯಗಳೊಂದಿಗೆ ಜನಿಸಿ ಎರಡರಲ್ಲೂ ಗರ್ಭಿಣಿಯಾಗಿದ್ದಾರೆ. ಕೆಲ್ಸಿ ಹ್ಯಾಚರ್ ತನ್ನ ಇನ್ಸ್ಟಾಗ್ರಾಮ್ ಖಾತೆ “ಡಬಲ್ ಹ್ಯಾಚ್ಲಿಂಗ್ಸ್” ನಲ್ಲಿ ತನ್ನ ಕಥೆಯನ್ನು ದಾಖಲಿಸುತ್ತಿದ್ದಾರೆ. 17 ನೇ ವಯಸ್ಸಿನಿಂದ ಅವಳು “ಯುಟರ್ಸ್ ಡಿಡೆಲ್ಫಿಸ್” ಅನ್ನು ಹೊಂದಿದ್ದಾಳೆ ಎಂದು ಗೊತ್ತಾಗಿತ್ತು ಡಬಲ್ ಗರ್ಭಾಶಯವನ್ನು ಹೊಂದಿರುವ ಅಪರೂಪದ ಸ್ಥಿತಿಯು ಸುಮಾರು 0.3 ಪ್ರತಿಶತದಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಲಾಗಿದೆ.
ಮೇ ತಿಂಗಳಲ್ಲಿ ಎಂಟು ವಾರಗಳ ಅಲ್ಟ್ರಾಸೌಂಡ್ ಚೆಕ್ ಅಪ್ ಸಮಯದಲ್ಲಿ ಮಸಾಜ್ ಥೆರಪಿಸ್ಟ್ ಮತ್ತು ಮೂರು ಮಕ್ಕಳ ತಾಯಿಯಾದ ಕೆಲ್ಸಿ ಹ್ಯಾಚರ್ ಗೆ ಅವಳಿ ಮಕ್ಕಳು ಇದೆ ಎಂಬುದು ಗೊತ್ತಾಗಿದೆ. ನಮಗೆ ಅಚ್ಚರಿಯಾಯಿತು.ಆ ಮೊದಲ ಅಲ್ಟ್ರಾಸೌಂಡ್ ಸಮಯದಲ್ಲಿ ನಾವು ಬಿದ್ದು ಬಿದ್ದು ನಕ್ಕೆವು ಎಂದು ಅವರು Instagram ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದು ಹೇಗಾಗಿದೆ ಎಂದರೆ ಆಕೆ ಪ್ರತ್ಯೇಕವಾಗಿ ಅಂಡೋತ್ಪತ್ತಿ ಮಾಡಿದ್ದಾಳೆ. ಪ್ರತಿ ಫಾಲೋಪಿಯನ್ ಟ್ಯೂಬ್ನಿಂದ ಒಂದು ಅಂಡಾಣು ಕೆಳಗೆ ಬಂದಿತು, ಅಂದರೆ ಗರ್ಭಾಶಯದ ಪ್ರತಿ ಬದಿಯಲ್ಲಿ ಕೆಳಗೆ ಬರುವುದು. ನಂತರ ಪ್ರತಿ ಪ್ರತ್ಯೇಕ ಗರ್ಭಾಶಯದ ಮೇಲೆ ವೀರ್ಯಾಣು ಚಲಿಸುತ್ತದೆ ಮತ್ತು ಫಲೀಕರಣವು ಪ್ರತ್ಯೇಕವಾಗಿ ಸಂಭವಿಸಿದೆ ಎಂದು ಬರ್ಮಿಂಗ್ಹ್ಯಾಮ್ನ ಮಹಿಳಾ ಮತ್ತು ಶಿಶುಗಳ ಕೇಂದ್ರದಲ್ಲಿ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಹ್ಯಾಚರ್ಗಾಗಿ ಕಾಳಜಿ ವಹಿಸುತ್ತಿರುವ ಪ್ರಸೂತಿ ತಜ್ಞೆ ಶ್ವೇತಾ ಪಟೇಲ್, ABC ಯ “ಗುಡ್ ಮಾರ್ನಿಂಗ್ ಅಮೇರಿಕಾ” ಗೆ ತಿಳಿಸಿದರು.