ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ.
ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್ ಅನ್ನು ಪ್ರೀತಿಸುತ್ತಿರುವುದಾಗಿ ಸುಕೇಶ್ ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ, ಹಬ್ಬ ಹರಿದಿನಗಳಿಗೆ ಪ್ರೇಮ ಸಂದೇಶವನ್ನು ಕಳುಹಿಸುತ್ತಲೇ ಇದ್ದಾನೆ. ಇದನ್ನು ತಡೆಗಟ್ಟಬೇಕು ಎಂದು ನಟಿ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.