ಬೆಂಗಳೂರು: ಸ್ವರ್ಗದ ಬಾಗಿಲು ತೆರೆಯುವ ಪುಣ್ಯದಿನವಾದ ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಈ ದಿನ ಭಕ್ತರು ವೆಂಕಟೇಶ್ವರನ ದೇಗುಲಕ್ಕೆ ಭೇಟಿ ಕೊಟ್ಟು ಸ್ವರ್ಗದ ದ್ವಾರ ಹಾದು ಹೋಗಿ, ಪುನೀತರಾಗುವ ಕ್ಷಣ ಎಂದೇ ಈ ದಿನವನ್ನ ಭಾವಿಸಲಾಗಿದೆ.
ಕೊರೊನಾ ಆತಂಕದ ನಡುವೆಯೂ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೊನಾ ಇರೋದ್ರಿಂದ ಏಕಾದಶಿಯ ಸಂಭ್ರಮದ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಲಾಗುತ್ತಿದೆ. ಆದ್ರೆ ಕೆಲ ಭಕ್ತರು ಮಾಸ್ಕ್ ಧರಿಸದೇ ದೇವಸ್ಥಾನಕ್ಕೆ ಆಗಮಿಸಿದ್ದ ದೃಶ್ಯಗಳು ಕಂಡುಬಂದಿವೆ.
ಈಗಾಗಲೇ ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದೇಗುಲದಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವರ ದರ್ಶನಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಮಾಸ್ಕ್ ಧರಿಸುವ ಬಗ್ಗೆ ನಿಗಾ ಇಡಲು, ಜನಜಂಗುಳಿ ನಿಯಂತ್ರಣಕ್ಕೆ ಭದ್ರತಾ ಸಿಬ್ಬಂದಿಯನ್ನ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.
ನಗರದ ವೈಯಾಲಿಕಾವಲ್ನ ಟಿಟಿಡಿ ದೇಗುಲದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬರುವ ಭಕ್ತರಿಗೆ ದೇಗುಲ ವತಿಯಿಂದಲೇ ಮಾಸ್ಕ್ ವ್ಯವಸ್ಥೆ ಕೂಡ ಮಾಡಲಾಗಿದೆ. ದೇಗುಲದ ಮುಂಭಾಗದಲ್ಲೇ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ