ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯತಿಗಾಗಿ ಅಷ್ಟೂ ಕಂಟೆಸ್ಟೆಂಟ್ ಗಳು ಕಾಯುವುದು ಸಾಮಾನ್ಯ. ಕೇವಲ ಕಂಟೆಸ್ಟೆಂಟ್ ಗಳು ಮಾತ್ರವಲ್ಲ, ಅಸಂಖ್ಯಾತ ಕಿಚ್ಚನ ಅಭಿಮಾನಿಗಳು ಕೂಡ ಈ ಪಂಚಾಯತಿಗಾಗಿ ಕಾಯುತ್ತಾರೆ. ಆದರೆ, ಈ ವಾರ ಕಿಚ್ಚನ ಪಂಚಾಯತಿ ಇರೋದು ಅನುಮಾನ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಕಿಚ್ಚನ ಪಂಚಾಯತಿ ಇಲ್ಲದೇ ಎಲಿಮಿನೇಷನ್ ಸಾಧ್ಯವಾ? ಎಂದು ಹಲವರು ಕೇಳಬಹುದು. ಆದರೆ, ಅದಕ್ಕೊಂದು ಲಾಜಿಕ್ ಹುಡುಕಿಕೊಂಡು ಈ ವಾರ ಮುಗಿಸಲಾಗುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ವಾರ ಕಿಚ್ಚನಿಗೆ ಏನಾಯಿತು? ಯಾಕೆ ಪಂಚಾಯತಿಗೆ ಬರುವುದಿಲ್ಲ ಎನ್ನುವುದಕ್ಕೂ ಕಾರಣವಿದೆ. ಇಂದಿನಿಂದ ಕಿಚ್ಚ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ.
ಕಿಚ್ಚನ ನೇತೃತ್ವದಲ್ಲಿ ಕೆಸಿಸಿ ನಡೆಯುತ್ತಿದೆ. ಇಂದು ಅದರ ಉದ್ಘಾಟನೆ ಸಮಾರಂಭ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಕಿಚ್ಚ ಇರಲೇಬೇಕು. ಜೊತೆಗೆ ಕಿಚ್ಚನ ಟೀಮ್ ಕೂಡ ಕ್ರಿಕೆಟ್ ಆಡುತ್ತಿದೆ. ಇಂದು ಮತ್ತು ನಾಳೆ ಕ್ರಿಕೆಟ್ ಇರುವುದರಿಂದ ಕಿಚ್ಚನ ಪಂಚಾಯತಿ ಅನುಮಾನ ಎಂದು ಹೇಳಲಾಗುತ್ತಿದೆ.