ತುಮಕೂರು:- ಫೈನಾನ್ಸ್ ನೌಕರರ ಕಿರುಕುಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮದ್ಲೇಹಳ್ಳಿಯಲ್ಲಿ ಜರುಗಿದೆ. 36 ವರ್ಷದ ಪುಪ್ಪಲತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.
ಪುಷ್ಪಲತಾ ತಿಪಟೂರು ನಗರದಲ್ಲಿರುವ ಬಜಾಜ್ ಫೈನಾನ್ಸ್ ನಿಂದ 90,000 ಸಾಲ ಪಡೆದಿದ್ದ. ಕೊನೆಯ ಕಂತು ಕಟ್ಟಲು ಸ್ವಲ್ಪ ವಿಳಂಬವಾದ ಹಿನ್ನೆಲೆ, ಒಂದು ಕಂತಿಗೆ ಮನೆಯ ಮುಂದೆ ಬಂದು ಫೈನಾನ್ಸ್ ನೌಕರರು ಗಲಾಟೆ ಮಾಡಿದರು. ಹರ್ಷವರ್ಧನ್ ಮತ್ತು ಮತ್ತೊಬ್ಬ ವ್ಯಕ್ತಿಯಿಂದ ಕಿರುಕುಳ ಆರೋಪ ಕೇಳಿ ಬಂದಿದೆ.
ಜೀವ ಹೋಗಿದೆ ಎಂದರೂ ಹಣವೇ ಮುಖ್ಯ ಎಂದು ಫೈನಾನ್ಸ್ ನೌಕರರು ಮಾತನಾಡಿದ್ದಾರೆ. ಸತ್ರೆ ಸಾಯ್ತಾರೆ, ನಮ್ಮ ಹಣ ಕೊಡಿ ಎಂದು ಪೈನಾನ್ಸ್ ನೌಕರರು ಹಾವಾಜ್ ಹಾಕಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಪತಿ ಕೃಷ್ಣಕುಮಾರ್ ದೂರು ನೀಡಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.