ಬೆಂಗಳೂರು:– ಜಾಸ್ತಿ ಕುಡಿಯಲ್ಲ ಎಂದಿದ್ದಕ್ಕೆ ಗೆಳೆಯನ ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಜಿತೇಂದ್ರ ಕೊಲೆಯಾದ ವ್ಯಕ್ತಿ. ಜಿತೇಂದ್ರ ತನ್ನ ಗೆಳೆಯರೊಟ್ಟಿಗೆ ರಾತ್ರಿ ಪಾರ್ಟಿಗೆ ಹೋಗಿದ್ದ. ಆರೋಪಿಗಳು ಜಿತೇಂದ್ರನಿಗೆ ಎಣ್ಣೆ ಕುಡಿಯಲು ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ಜಿತೇಂದ್ರ ಮದ್ಯವನ್ನು ಸೇವನೆ ಮಾಡಿದ್ದ. ಆದರೆ ಗೆಳೆಯರು ಜೀತೆಂದ್ರನಿಗೆ ಪದೇಪದೆ ಕುಡಿಯಲು ಒತ್ತಾಯ ಮಾಡುತ್ತಿದ್ದರು.
ಇದರಿಂದಾಗಿ ಜಾಸ್ತಿ ಕುಡಿಯಲ್ಲ ಎಂದು ಅಲ್ಲಿಂದ ಜಿತೇಂದ್ರ ಎದ್ದು ಹೋಗಿದ್ದ. ಅದಾದ ಬಳಿಕ ಅಲ್ಲೆ ಪಕ್ಕದಲ್ಲಿದ್ದ ಖಾಲಿ ನಿವೇಶನಲ್ಲಿ ಅಡಗಿ ಕುಳಿತಿದ್ದ. ಈ ವಿಷಯ ತಿಳಿದು ಆರೋಪಿಗಳು ಅಲ್ಲಿಗೂ ಬಂದು, ಪಾರ್ಟಿಗೆ ಬಾ ಎಂದು ಮತ್ತೆ ಪೀಡಿಸುತ್ತಿದ್ದರು. ಜಿತೇಂದ್ರ ಬಾರದೇ ಇದ್ದಾಗ, ಕುತ್ತಿಗೆಗೆ ಸ್ಕಾರ್ಫ್ ಹಾಕಿ ಎಳೆದು ತರಲು ಹೋಗಿದ್ದಾನೆ. ಆದರೆ ಸ್ಕಾರ್ಫ್ ಜಿತೇಂದ್ರನ ಕುತ್ತಿಗೆಯನ್ನು ಬಿಗಿದಿತ್ತು, ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಬಳಿಕ ಗಾಬರಿಯಲ್ಲಿ ಅಲ್ಲೆ ಇದ್ದ ಪೊದೆಯಲ್ಲಿ ಗೆಳೆಯನ ಮೃತದೇಹ ಬಿಸಾಡಿ ಪರಾರಿಯಾಗಿದ್ದಾರೆ.