ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ನೀಡಿರುವ ಹಿಜಬ್ (Hijab) ನಿಷೇಧ ವಾಪಸ್ ಹೇಳಿಕೆ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅಂತರ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ತೆರಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಕೊಟ್ಟು 2 ದಿನ ಕಳೆದರೂ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇಂದು (ಭಾನುವಾರ) ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಕೊಡದೇ ಕಾರಿನಲ್ಲೆ ಕುಳಿತು ಮಾತನಾಡಲ್ಲ ಎಂದು ಕೈ ಸನ್ನೆ ಮಾಡಿ ತೆರಳಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಲು ಡಿಸಿಎಂ ಡಿಕೆಶಿ ನಿರ್ಧರಿಸಿದಂತಿದೆ.
ಬಳಿಕ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನಿಗಮ ಮಂಡಳಿಗೆ ಕಾರ್ಯಕರ್ತರ ಪಟ್ಟಿ ಕೊಡಬೇಕಾದ ಕಾರಣ ಆ ಸಂಬಂಧ ಪಟ್ಟಿ ಅಂತಿಮ ಪಡಿಸುವ ಬಗ್ಗೆ ಪೂರ್ವ ತಯಾರಿಯ ಮಾತುಕತೆ ನಡೆಸಿದರು. ಹಿಜಬ್ ವಿಚಾರ ಮಾತನಾಡಿದ ನಂತರ ಮೊದಲ ಬಾರಿಗೆ ಭೇಟಿ ಇದಾಗಿದ್ದು, ಹೇಳಿಕೆ ವಿಚಾರವೂ ಚರ್ಚೆಯಾಗಿದೆ ಎನ್ನಲಾಗಿದೆ.