ಬೆಂಗಳೂರು ಗ್ರಾಮಾಂತರ: ಹನುಮ ಜಯಂತಿಯಲ್ಲಿ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿ ಅಸ್ವಸ್ಥರಾಗಿರುವ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದಲ್ಲಿ ನಡೆದಿದೆ.
ನಗರದ ದೇವಾಲಯಗಳಾದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಪುಲಿಯೊಗರೆ, ಪಾಯಸ,ಲಡ್ಡು ಸೇವನೆ ಮಾಡಿದ್ದ ಪ್ರಸಾದ ತಿಂದು ವಾಂತಿ ಭೇದಿಯಾಗಿ ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ.
ಪುಡ್ ಪಾಯಿಸಾನ್ನಿಂದ ವೃದ್ಧೆ ಮೃತಪಟ್ಟಿದ್ದಾಳೆ.ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಅಸ್ವಸ್ತಗೊಂಡ ಭಕ್ತರಿಗೆ ಚಿಕಿತ್ಸೆ ನೀಡಲಾಗಿದೆ.