ಬೆಂಗಳೂರು: ಜಾತಿಗಣತಿ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವ ವಿಚಾರ ಲಿಂಗಾಯತರು ಹಿಂದೂಗಳು ಅಲ್ಲವೆಂಬ ನಾಯಕರ ಹೇಳಿಕೆಗೆ ಆಕ್ರೋಶ ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಎಂದು ಟ್ವೀಟ್ ಮೂಲಕ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಇದು ಸಿದ್ದರಾಮಯ್ಯ ಯೋಜನೆಯ ಮುಂದುವರಿದ ಭಾಗವಾಗಿದೆ ಹಿಂದುತ್ವ ಈ ನೆಲದ ಆತ್ಮ ಬಸವಣ್ಣ ಆರಾಧಿಸಿದ ಲಿಂಗವೂ ಈಶ್ವರನ ಅಂಶ ಹಿಂದುತ್ವ ಬದುಕುವ ದಾರಿ ಎಂದು ಟ್ವಿಟ್ ಮೂಲಕ ಯತ್ನಾಳ್ ಕಿಡಿ
ಜಗತ್ತಿನ ಯಾವುದಾದ್ರೂ ಧರ್ಮ ಇನ್ನೊಬ್ಬರ ಮೇಲೆ ದಾಳಿ ಮಾಡದೇ ಎಲ್ಲರನ್ನೂ ಗೌರವಿಸೋದು ಹಿಂದುತ್ವ ಮಾತ್ರವೆಂದು ಯತ್ನಾಳ್ ವಾಗ್ದಾಳಿ ಲಿಂಗಾಯತ, ವೀರಶೈವ ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ ಈಗ ಲೋಕಸಭೆ ಚುನಾವಣೆಗೆ ಬೇರೆ ಯಾವುದೇ ಚರ್ಚಾ ವಿಷಯವಿಲ್ಲದೇ ಈ ಪ್ರತ್ಯೇಕ ಧರ್ಮದ ಚರ್ಚೆಯನ್ನು ಆರಂಭಿಸಿದ್ದಾರೆ ಎಂದು ಯತ್ನಾಳ್ ಟ್ವಿಟ್
ಪಂಚಪೀಠಗಳು, ಬಸವಣ್ಣನವರ ಅನುಯಾಯಿಗಳು ಹಾಗೂ ಶರಣರ ತತ್ವಗಳು ಎಲ್ಲವೂ ಹಿಂದೂ ಸಂಸ್ಕೃತಿಯ ಭಾಗವಾಗಿದೆ ಅಲ್ಲಿಯೂ ಶಿವ, ಇಲ್ಲಿಯೂ ಶಿವನೇ -ಶಾಸಕ ಬಸನಗೌಡ ಯತ್ನಾಳ್ ವೀರಶೈವ-ಲಿಂಗಾಯತ ಹಿಂದೂ ಸಂಸ್ಕೃತಿಯ ಭಾಗವಾಗಿದೆ ಟ್ವಿಟ್ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.