ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದೆ, ಅಧಿಕಾರದ ಅಮಲಿನಲ್ಲಿದೆ ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೊದಲನೆಯದಾಗಿ ಕಳೆದ ಹಲವು ದಶಕಗಳಿಂದ ಎಲ್ಲಾ ಹಿಂದೂ ಕಾರ್ಯಕರ್ತರ ಕನಸು. ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ಆಗಬೇಕು ಅನ್ನೋದು ಹೋರಾಟ. ನಾವ್ಯಾರು ಕಲ್ಪನೆ ಇಟ್ಟಿರಲಿಲ್ಲ ಮುಂದೊಂದು ದಿನ ಮೊದಿ ಅವರ ಕೈಯಿಂದ ಲೋಕಾರ್ಪಣೆ ಆಗಲಿದೆ ಅಂತ ಅಂದರು.
ಎರಡನೆಯದ್ದು ಅನೇಕ ಸಂದರ್ಭದಲ್ಲಿ ಭಾಷಣ ಮಾಡ್ತಿದ್ದೆವು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಏತರ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಂದಿನ ದಿನದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಂಧರ್ಭದಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಿದ್ದೇವೆದೇಶದ ಇತಿಹಾಸಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಬರುವ ಸಂದರ್ಭದಲ್ಲಿ ನಮಗೆ ಹೊಣೆಇದೆ.
ಕರ್ನಾಟಕದಲ್ಲಿ 28ಕ್ಕೆ 28ಕ್ಷೇತ್ರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಸೇರಿ ಗೆಲ್ಲಬೇಕಿದೆ ಕಾಂಗ್ರೆಸ್ ಅಧಿಕಾರದಲ್ಲಿದೆ, ಅಧಿಕಾರದ ಅಮಲಿನಲ್ಲಿದೆ ಅದಕ್ಕೆ ತಕ್ಕ ಪಾಠ ಕಲಿಸಬೇಕು ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದಕ್ಷಿಣ ಭಾರತ ಬಿಜೆಪಿಗೆ ಸುಭದ್ರಕೋಟೆ ಅನ್ನೋದನ್ನ ಸಾಭೀತು ಮಾಡಬೇಕಿದೆ ಮುಂಬರುವ ದಿನದಲ್ಲಿ ಮೋದಿ ಅವರ ಪರವಾಗಿದೆ ಮೋದಿ ಅವರ ಜನಪ್ರಿಯತೆಯನ್ನ ಹೇಗೆ ಮತವಾಗಿ ಪರಿಗಣಿಸಬೇಕು ಅನ್ನೋದು ನಮ್ಮ ಸವಾಲು ಮೋದಿ ಅವರ ಜನಪ್ರಿಯತೆ ಮತವಾಗಿ ಪರಿವರ್ತನೆ ಮಾಡಬೇಕಿದೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವ ಸಂಧರ್ಭದಲ್ಲಿ ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.ಸವಾಲನ್ನ ಯಶಸ್ವಿಯಾಗಿ ಮೆಟ್ಟಿ ನಿಂತು ಸಾಬೀತುಪಡಿಸಲು ಎದುರಾಳಿಗಳನ್ನ ಹಗುರವಾಗಿ ತೆಗೆದುಕೊಳ್ಳಬಾರದು.
ಮೋದಿ ಅವರ ಜನಪ್ರಿಯ ಯೋಜನೆಗಳನ್ನ ಮನೆ ಮನೆಗೆ ತಲುಪಿಸಬೇಕಿದೆ ವಿಕಸಿತ ಭಾರತ ಯೋಜನೆ ಕಾರ್ಯಕ್ರಮದಲ್ಲಿ ನಾವು ನೋಡಿದ್ದೇವೆ ಕಾರ್ಯಕರ್ತರ, ಜನರ ಮನೆಗೆ ತಲುಪಿಸುವ ಕೆಲಸ ಮಾಡಲಾಗ್ತಿದೆ.
ಮುಂಬರುವ ದಿನದಲ್ಲಿ ಜಿಲ್ಲೆ,ತಾಲ್ಲೂಕು, ಬಿಬಿಎಂಪಿ, ವಿಧಾನಸಭೆ ಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಂಡು ಮುಂದೆ ಹೋಗಬೇಕು ನಾನು ಪದಾಧಿಕಾರಿಗಳಿಗೆ ಮನವಿ ಮಾಡ್ತೀನಿ ನಾವೆಲ್ಲ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಲ್ಲಾ ಹಬ್ಬ ಹರಿದಿನ, ಕುಟುಂಬ ಬದಿಗೊತ್ತಿ ವಿಶ್ರಮಿಸದೆ ಕೆಲಸ ಮಾಡಬೇಕಿದೆ ಹೇಗೆ ಮೋದಿ ಅವರು ವಿಶ್ರಾಂತಿ ಪಡೆಯದೆ ಕೆಲಸ ಮಾಡ್ತಿದ್ದಾರೆ ಅದೆ ರೀತಿ ನಾವು ಕೆಲಸಮಾಡಬೇಕು.
ನಮಗೆ ಜಾತಿ ಇಲ್ಲ, ನಾವೆಲ್ಲಾ ಒಂದೇ ಹೇಗೆ ಪಕ್ಷದಲ್ಲಿ ಹಿರಿಯರಿಗೆ ಗೌರವ ಕೊಡ್ತೀವಿ, ಅದೇ ರೀತಿ ಕಾರ್ಯಕರ್ತರಿಗೆ ಗೌರವ ಕೊಡಬೇಕಿದೆ ನಾವೆಲ್ಲಾ ತಂಡವಾಗಿ ಕೆಲಸ ಮಾಡಬೇಕಿದೆ ಹೊಸ ತಂಡ ರಾಜ್ಯದ, ಪಕ್ಷದ ಹಾಗೂ ದೇಶದ ಹಿತ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದರು
ಸಭೆಯಲ್ಲಿ ಭಾಗಿಯಾದ ಸಂಘಟನಾ ಪ್ರಧಾನಕಾರ್ಯದರ್ಶಿ ರಾಜೇಶ್ , ಪ್ರಧಾನಕಾರ್ಯದರ್ಶಿ ಸುನಿಲ್ ಕುಮಾರ್, ಪ್ರೀತಮ್ ಗೌಡ, ಪಿ ರಾಜೀವ್ ಹಾಗೂ ನಂದೀಶ್ ರೆಡ್ಡಿ ಭಾಗಿಯಾಗಿದ್ದರು.