ಬೆಂಗಳೂರು: ಸ್ಕೋಪ್ ಫೌಂಡೇಶನ್ ಇಂಕ್ ಸ್ಥಾಪಕ ಅಧ್ಯಕ್ಷ, ಮಂಡ್ಯ ಮೂಲದ ಡಾ. ಹಲ್ಲೆಗೆರೆ ಮೂರ್ತಿ (ಲಕ್ಷ್ಮೀ ನರಸಿಂಹಮೂರ್ತಿ) ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಈ ವೇಳೆ ಎಂಎಲ್ಸಿ ದಿನೇಶ್ ಗೂಳಿಗೌಡ, ಅಮೇರಿಕಾದ ಅಕ್ಕಾ ಸಂಸ್ಥೆ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಜತೆಗಿದ್ದರು.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಜನವರಿ 21 ರಂದು ಹಮ್ಮಿಕೊಂಡಿರುವ “ಭೂಮಿ ತಾಯಿ ಉಳಿಸಿ, ಮರ ಗಿಡ ಬೆಳೆಸಿ” ಸಂದೇಶ ಸಾರುವ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಲ್ಲೆಗೆರೆ ಮೂರ್ತಿ ಅವರು ಡಿಸಿಎಂ ಅವರನ್ನು ಆಹ್ವಾನಿಸಿದರು.
ಮಂಡ್ಯ ತಾಲೂಕಿನ ಹಲ್ಲೆಗೆರೆಯಲ್ಲಿ ಶ್ರೀ ಭೂದೇವಿ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ ಸ್ಥಾಪನೆ ಸಂಬಂಧ ಚರ್ಚಿಸಿದರು. ಹಲ್ಲೆಗೆರೆ ಮೂರ್ತಿ ಅವರ ಪುತ್ರ ಡಾ ವಿವೇಕ್ ಮೂರ್ತಿ ಅವರು ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರು ಹಾಗೂ ಅಮೇರಿಕ ಅಧ್ಯಕ್ಷ ಜೋಬೈಡನ್ ಅವರ ಆರೋಗ್ಯ ಸಲಹೆಗಾರರು ಆಗಿದ್ದಾರೆ.