ಬೆಂಗಳೂರು: ಹೊಸತಳಿ ಜೆಎನ್.1 ಪತ್ತೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಜೆಎನ್.1 ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡ ರಾಜ್ಯ ಸರ್ಕಾರ ನಿರ್ಬಂಧವಿಲ್ಲದಿದ್ರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಹಲವು ಅಗತ್ಯ ಕ್ರಮ ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ಕ್ರಮದ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ
ಟೆಸ್ಟಿಂಗ್ ಹೆಚ್ಚಳಕ್ಕೆ ಮುಂದು..ಸೋಂಕಿನ ಕಡಿವಾಣಕ್ಕೆ ಮುನ್ನೆಚ್ಚರಿಕಾ ಕ್ರಮ ಜೆಎನ್.1 ಕಡಿವಾಣಕ್ಕೆ ಸರ್ಕಾರ ಕ್ರಮ
- ರಾಜ್ಯದಲ್ಲಿ ಈಗಾಗಲೇ ನೀಡಿರುವ 5 ಸಾವಿರ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಬೇಕು
- ಸೋಂಕಿತರ ಸಂಪರ್ಕಿತರು ಕೊರೊನಾ ಲಕ್ಷಣ ಹೊಂದಿದ್ದಲ್ಲಿ ಟೆಸ್ಟ್ ಮಾಡಿಸಿಕೊಳ್ಳಬೇಕು
- ಸೋಂಕಿರನ್ನ ಪಿಹೆಚ್ ಸಿ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಬೇಕು
- ಐಸಿಯುನಲ್ಲಿರುವ ಸೋಂಕಿತರನ್ನ Tele ICU ನ ಮೂಲಕ ಮೇಲ್ವಿಚಾರಣೆ ನಡೆಸುವುದು
- ಅಗತ್ಯವಿರುವ ಸೋಂಕಿತರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸ್ ಗಾಗಿ ಕಳುಹಿಸುವುದು
- ಮುನ್ನೆಚ್ಚರಿಕ ಕ್ರಮವಾಗಿ PSA plantಗಳು & LMO plantಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು
- PESO license ಆದಷ್ಟು ಶೀಘ್ರ ಪಡೆಯುವುದು, ಆಕ್ಸಿಜನ್ ಉತ್ಪಾದನಾ ಪ್ರಮಾಣ ಪುಷ್ಟಿಕರಿಸಬೇಕು
- ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸುವುದು. ಬೆಡ್ ಹಾಗೂ ವೆಂಟಿಲೇಟರ್ ಸಿದ್ಧತೆ ಪರಿಶೀಲನೆ
- 30 ಸಾವಿರ ಪ್ರಿಕಾಷಿನರಿ ಡೋಸ್ ಕೊರೊನಾ ಲಸಿಕೆ ನೀಡುವತ್ತ ಗಮನ ಹರಿಸುವುದು
- ವೈದ್ಯರಿಗೆ ಹಾಗೂ ಇಮ್ಯೂನಿಟಿ ಕಮ್ಮಿಯಿರೋರಿಗೆ ಪ್ರಿಕಾಷಿನರಿ ಡೋಸ್ ನೀಡುವುದು
- .ಟಿಐಜಿಎಸ್( Tata Institute for Genetics and Society) ಮಾಡ್ತಿರುವ Sewage Surveillance ಮುಂದುವರೆಸುವುದು
12.ಜೆಎನ್.1 ಏರಿಕೆಯಾಗಿರುವ ಬೆನ್ನಲ್ಲೇ ಕೋವಿಡ್ ಮುನ್ಸೂಚನಾ ವರದಿ ಸಿದ್ದಪಡಿಸಬೇಕು
- ಬೆಂಗಳೂರಿನ ಎರಡು ಆಸ್ಪತ್ರೆಯಲ್ಲಿ ಕೋವಿಡ್ ಐಸೋಲೇಷನ್ ವಾರ್ಡ್ ಸಿದ್ಧವಾಗಿರಬೇಕು
- ವಿಕ್ಟೋರಿಯಾ ಆಸ್ಪತ್ರೆ H ಬ್ಲಾಕ್, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ವಾರ್ಡ್ ಸಿದ್ಧವಾಗಿರಬೇಕು
- ಎಲ್ಲಾ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸಿದ್ಧವಾಗಿರಬೇಕು
- ರಾಜ್ಯದ ಡೆಟ್ ಆಡಿಟ್ ಕಮಿಟಿ ಕೊರೊನಾದಿಂದ ಆಗ್ತಿರುವ ಸಾವಿನ ಅಧ್ಯಯನ ನಡೆಸಬೇಕು
- ಅಧ್ಯಯನ ಮಾಡಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಶಿಫಾರಸ್ಸು ನೀಡುವುದು
- ಯಾರು ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ
- 60 ವರ್ಷ ಮೇಲ್ಪಟ್ಟವರು ಹಾಗೂ ಕೊಮಾರ್ಬಟಿಸ್ ಪೇಷೆಂಟ್ ಧರಿಸಬೇಕು
- ಹೊಸ ವರ್ಷಾಚರಣೆಗೆ ಯಾವುದೇ ನಿರ್ಭಂಧವಿಲ್ಲ, ರಾಜ್ಯದ ಗಡಿ ಭಾಗಗಳಲ್ಲಿ ತಪಾಸಣೆಯಿಲ್ಲ
- ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಿ
- ಕಮ್ಮಿಯಾಗುವ ವರೆಗೂ ಪೋಷಕರು ಶಾಲೆಗೆ ಕಳುಹಿಸದಂತೆ ಮನವಿ
- ಕೊರೊನಾ ಪಾಸಿಟಿವಿ ಬಂದರೆ ಹೋಂ ಐಸೋಲೇಷನ್ ಕಡ್ಡಾಯ
- ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಪಾಸಿಟಿವಿ ಬಂದರೆ 7 ದಿನ ರಜೆ ಪಡೆಯಲು ಅರ್ಹರು
- ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟಿಂಗ್ ದರ ನಿಗದಿಗೆ ಸಮಿತಿ ರಚಿಸಿ, ,2 ದಿನದಲ್ಲಿ ವರದಿ ನೀಡಬೇಕು