ಮುಕೇಶ್ ಅಂಬಾನಿ ಬರೋಬ್ಬರಿ 829514 ಕೋಟಿ ನಿವ್ವಳ ಆಸ್ತಿಯೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. 1700000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷರಾಗಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಬಹು-ಶತಕೋಟಿ ಡಾಲರ್ ಅಂಗಸಂಸ್ಥೆಗಳನ್ನು ಹೊಂದಿದೆ,
ಹಳೆಯ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರಿಗೆ ಹಣದ ಮೌಲ್ಯವನ್ನು ಕಲಿಸಲು ಪ್ರತಿ ವಾರ 5 ಪಾಕೆಟ್ ಮನಿ ನೀಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಮಾತ್ರವಲ್ಲ, ಅನಂತ್ ಅಂಬಾನಿ ದುಬಾರಿ ವಾಚ್ಗಳು ಮತ್ತು ಕಾಸ್ಟ್ಲೀ ಕಾರುಗಳ ಕಲೆಕ್ಷನ್ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಶಾಲಾ ದಿನಗಳಲ್ಲಿ ಅವರನ್ನು ಸಹಪಾಠಿಗಳು ಭಿಕಾರಿ ಎಂದು ಕರೆಯುತ್ತಿದ್ದರೂ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಹೌದು ಸ್ಕೂಲ್ನಲ್ಲಿ ವಿದ್ಯಾರ್ಥಿಗಳು ಅನಂತ್ ಅಂಬಾನಿ ಕೇವಲ ಐದು ರೂ. ಪಾಕೆಟ್ ಮನಿ ಪಡೆಯುತ್ತಿರುವುದಕ್ಕೆ ಭಿಕಾರಿ ಎಂದು ಕರೆದು ಲೇವಡಿ ಮಾಡಿದ್ದರು. ಅನಂತ್ ಅಂಬಾನಿ, ತಮ್ಮ ಶಾಲಾ ಶಿಕ್ಷಣವನ್ನು ಮುಕೇಶ್ ಅಂಬಾನಿ ಒಡೆತನದ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಪೂರೈಸಿದರು. ಇಲ್ಲಿ ಸಹಪಾಠಿಗಳು ಅವರನ್ನು, ‘ತೂ ಅಂಬಾನಿ ಹೈ ಯಾ ಭಿಕಾರಿ’ ಎಂದು ಕೀಟಲೆ ಮಾಡುತ್ತಿದ್ದರು.
ಹಳೆಯ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರಿಗೆ ಹಣದ ಮೌಲ್ಯವನ್ನು ಕಲಿಸಲು ಪ್ರತಿ ವಾರ 5 ಪಾಕೆಟ್ ಮನಿ ನೀಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಅನಂತ್ ಅಂಬಾನಿ, ಒಮ್ಮೆ ಕ್ಯಾಂಟೀನ್ನಲ್ಲಿ ಖರ್ಚು ಮಾಡಲು 5 ರೂಪಾಯಿಗಳನ್ನು ಪಾಕೆಟ್ ಮನಿ ಪಡೆದಿದ್ದಕ್ಕಾಗಿ ಶಾಲೆಯಲ್ಲಿ ಅಣಕಿಸಲ್ಪಟ್ಟಿದೆ ಎಂಬುದನ್ನು ಹೇಳಿದರು.
ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ ಸಹ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ವಿನಮ್ರ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದರು.