ಉಕ್ರೇನ್ ವಿರುದ್ಧ ಹೋರಾಡುತ್ತಿರುವ ರಷ್ಯಾಗೆ ಒಳಗಿನ ಕಿಚ್ಚು ದೊಡ್ಡದಾಗುತ್ತಿದೆ. ಕೆಲವು ತಿಂಗಳ ಹಿಂದೆ ಸ್ವತಃ ರಷ್ಯಾದ ಖಾಸಗಿ ಸೈನಿಕ ಪಡೆ ಮುಖ್ಯಸ್ಥರೇ, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ರೊಚ್ಚಿಗೆದ್ದು ಆಂತರಿಕ ಯುದ್ಧ ಸಾರಿದ್ದ. ಕೊನೆಗೆ ಭೀಕರವಾಗಿ ಮೃತಪಟ್ಟಿದ್ದರು ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥ. ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಶತ್ರುವಾಗಿ ಗುರುತಿಸಿಕೊಂಡಿದ್ದ ಅಲೆಕ್ಸಿ ನವಲ್ನಿ ನಾಪತ್ತೆಯಾಗಿ ಸಂಚಲನ ಸೃಷ್ಟಿಯಾಗಿತ್ತು.
ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಹೋರಾಟ ನಡೆಸಿದ್ದ ಅಲೆಕ್ಸಿ ನವಲ್ನಿ ಈಗ ಜೈಲಿನಲ್ಲಿ ಕೊಳೆಯುವಂತಾಗಿದೆ. 2020ರಲ್ಲಿ ನವಲ್ನಿಗೆ ವಿಷ ಹಾಕಿ, ಕೊಲೆಗೆ ಪ್ರಯತ್ನ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ನಂತರ ನವಲ್ನಿ ಜರ್ಮನಿಗೂ ತೆರಳಿ ಚಿಕಿತ್ಸೆ ಪಡೆದಿದ್ದರು. ಆದ್ರೆ ಮರಳಿ ರಷ್ಯಾಗೆ ಬಂದ ಬಳಿಕ ಅಲೆಕ್ಸಿ ನವಲ್ನಿ ಬಂಧನವಾಗಿ ಸಂಚಲನ ಸೃಷ್ಟಿಯಾಗಿತ್ತು. ಹೀಗಿದ್ದಾಗ ಪುಟಿನ್ ಶತ್ರುಗೆ ಜೈಲು ಶಿಕ್ಷೆ ಗ್ಯಾರಂಟಿ ಆಗಿದ್ದು, ಇನ್ನೂ 20 ವರ್ಷ ಹೊರಗೆ ಬರುವ ಯಾವುದೇ ಸಾಧ್ಯತೆ ಇಲ್ಲ. ಈ ವಾತಾವರಣದ ಮಧ್ಯೆ ದಿಢೀರ್ ಇದೇ ಮನುಷ್ಯ ನಾಪತ್ತೆಯಾಗಿ ಸಂಚಲನ ಸೃಷ್ಟಿಯಾಗಿತ್ತು.
ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವೈರಿ, ಇದೇ ಕಾರಣಕ್ಕೆ ನವಲ್ನಿ ವಿರುದ್ಧ ಗಂಭೀರ ಆರೋಪ ಹೊರಿಸಿ ಜೈಲಿಗೆ ಹಾಕಿರುವ ಆರೋಪ ಇದೆ. ಅದರಲ್ಲೂ ಉಗ್ರವಾದದ ಕಾರಣಕ್ಕೆ 19 ವರ್ಷ ಜೈಲು ಶಿಕ್ಷೆ ಅನುಭವಿಸುವ ಸ್ಥಿತಿ ಎದುರಾಗಿದೆ ಅಲೆಕ್ಸಿ ನವಲ್ನಿಗೆ. ಹೀಗೆ ನವಲ್ನಿ ಪರದಾಡುತ್ತಿರುವ ಸಮಯದಲ್ಲಿ, ಅವರ ಬೆಂಬಲಿಗರು ಭಯಪಟ್ಟು ರಷ್ಯಾ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದರು. ಜೈಲಿನಲ್ಲಿ ಇದ್ದ ನವಲ್ನಿ ನಾಪತ್ತೆಯಾಗಿದ್ದು ಇದರ ಹಿಂದೆ ಪುಟಿನ್ ಕೈವಾಡ ಇದೆ ಎನ್ನುವ ಆರೋಪ ಕೇಳಿಬಂದಿತ್ತು. ಅದಕ್ಕೆಲ್ಲಾ ಈಗ ಉತ್ತರ ಹೊರಬಿದ್ದಿದೆ.