ನೀವು ಸಣ್ಣ ವಿಚಾರಕ್ಕೆ ಒತ್ತಡಕ್ಕೆ ಒಳಗಾಗುವಾಗ ಒಂದು ಕ್ಷಣ ನಿಮ್ಮ ಆಲೋಚನೆಗಳನ್ನು ನಿಲ್ಲಿಸಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ನಿಧಾನವಾಗಿ ಬಿಡಿ. ಇದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ.
ಹಾಗೇ ನಿಮ್ಮ ಮನಸ್ಸು ಒತ್ತಡಕ್ಕೆ ಒಳಗಾದಾಗ ಶಾಂತವಾದ ಸ್ಥಳದಲ್ಲಿ ಕುಳಿತು ನಿಮ್ಮ ಭಾವನೆಗಳನ್ನು ನಿಗ್ರಹಿಸಿ. ಮತ್ತು ಮನಸ್ಸನ್ನು ಶಾಂತಗೊಳಿಸಿ.
ನಿಮ್ಮ ಆಲೋಚನೆಗಳ ಮೇಲೆ ಕೇಂದ್ರೀಕರಿಸಿ. ನಿಮ್ಮ ಆಲೋಚನೆಗಳನ್ನು ವಿಮರ್ಶೆ ಮಾಡಿ. ಅದು ಸತ್ಯವೇ ಎಂಬುದನ್ನು ಅರ್ಥಮಾಡಿಕೊಳ್ಳಿ. ಆಗ ಆ ಆಲೋಚನೆಯಿಂದ ದೂರ ಸರಿಯಬಹುದು.
ಹಾಗೇ ನೀವು ಸಂಹವನ ಮಾಡುವ ರೀತಿಯನ್ನು ಬದಲಾಯಿಸಿ. ಇದರಿಂದ ನಿಮ್ಮ ಮನಸ್ಸು ಒತ್ತಡಕ್ಕೆ ಒಳಗಾಗುವುದಿಲ್ಲ.