ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆ ವಿಚಾರ ಹಿನ್ನೆಲೆ ಸಚಿವ ಶಿವರಾಜ್ ತಂಗಡಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ನಾರಾಯಣಗೌಡರ ಹೋರಾಟವನ್ನ ಬೆಂಬಲಿಸುತ್ತೇನೆ ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಕಾನೂನು ಮಾಡುತ್ತಿದ್ದೇವೆ ಸರೋಜಿನಿ ಮಹಿಷಿ ವರದಿ ಎರಡೂ ಸದನಗಳಲ್ಲಿ ಪಾಸ್ ಆಗಿದೆ ಈ ವರಿದಯ ರೂಲ್ಸ್ ಫ್ರೇಮ್ ಮಾಡುತ್ತಿದ್ದೇವೆ ಎಂದರು.
ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ಅಂತಿಮ ಸಭೆ ಮಾಡುತ್ತೇವೆ ಬೋರ್ಡ್ನ 60% ಕನ್ನಡ ಪದಗಳು ಇರಬೇಕು ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆ, ಕನ್ನಡ ಭೋದನೆ ಅನುಷ್ಠಾನಕ್ಕಾಗಿ ಟಾಸ್ಕ್ಫೋರ್ಸ್ ಸಮಿತಿ ರಚನೆ ಕನ್ನಡ ಸಂಸ್ಕೃತಿ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಒಳಗೊಂಡ ಟಾಸ್ಕ್ಫೋರ್ಸ್ ಸಮಿತಿ ರಚನೆಗೆ ಚಿಂತನೆ