ಬೆಂಗಳೂರು:- ಕನ್ನಡಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು, ಈ ಹಿನ್ನೆಲೆ ನಗರದ ಚಿಕ್ಕಜಾಲ ಪೊಲೀಸರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅರ್ಧ ಕಿಲೋಮೀಟರ್ ಹಿಂದೆಯೇ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಫುಲ್ ಸೆಕ್ಯೂರಿಟಿ ನೀಡಲಾಗಿದ್ದು, ಪರಪ್ಪನ ಅಗ್ರಹಾರ ಮುಖ್ಯರಸ್ತೆಯಿಂದ ಜೈಲು ರಸ್ತೆಗೆ ಯಾರಿಗೂ ಪ್ರವೇಶ ಇಲ್ಲ. ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ. ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆ ಒದಗಿಸಲಾಗಿದೆ.
ಕರವೇ ಕಾರ್ಯಕರ್ತರು ಜೈಲಿನ ಬಳಿ ಆಗಮಿಸಬಹುದು ಎನ್ನುವ ಹಿನ್ನೆಲೆ.. ಯಾರಿಗೂ ಮೇಲಿನ ಬಳಿ ಪ್ರವೇಶಕ್ಕೆ ಅವಕಾಶ ಇಲ್ಲ. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಪೊಲೀಸರು ಕರೆ ತಂದಿದ್ದು, ಇದು ಮುಟ್ಟಾಳ ಸರ್ಕಾರ ಎಂದು ಬೈದು ನಾರಾಯಣಗೌಡ ಒಳ ಹೋಗಿದ್ದಾರೆ.