ಬಳ್ಳಾರಿ, ಡಿಸೆಂಬರ್ 27; ಕರ್ನಾಟಕ ಸರ್ಕಾರ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಫ್ರೂಟ್ಸ್ ಐಡಿ ಪಡೆಯಬೇಕು ಎಂದು ಎಂದು ಅಭಿಯಾನವನ್ನೇ ನಡೆಸುತ್ತಿದೆ. ಬಳ್ಳಾರಿ ಜಿಲ್ಲೆ ಫ್ರೂಟ್ಸ್ ನೋಂದಣಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಬಿಡುಗಡೆ ಮಾಡಿರುವ ವರದಿಯನ್ನು ನೋಡಿ ಹರ್ಷ ವ್ಯಕ್ತಪಡಿಸಿರುವ ಅವರು, “ನಮ್ಮ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಳ್ಳಾರಿ ಜಿಲ್ಲಾಡಳಿತ ನೀಡಿದ ನಿಗದಿತ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ಮೊದಲ ಜಿಲ್ಲೆಯಾಗಿದೆ” ಎಂದು ಹೇಳಿದ್ದಾರೆ.
ಬರಗಾಲದ ಹಿನ್ನಲೆಯಲ್ಲಿ ರೈತರು ತಮ್ಮ ಬೆಳೆ ನಷ್ಟ ಪರಿಹಾರ ಪಡೆಯಲು ಮತ್ತು ರಾಜ್ಯ ಸರ್ಕಾರವು ಫ್ರೂಟ್ಸ್ ತಂತ್ರಾಂಶದ ಮೂಲಕ ಪರಿಹಾರ ಒದಗಿಸಲು ನೋಂದಎಷ್ಟು ನೋಂದಣಿಗಳು?; ಬಳ್ಳಾರಿ ಜಿಲ್ಲೆಯಲ್ಲಿ ಭೂಮಿ ತಂತ್ರಾಂಶದಲ್ಲಿ 456020 ಪ್ಲಾಟ್ಗಳಿವೆ. ಕೃಷಿಯೇತರ ಭೂಮಿ 58310 ಪ್ಲಾಟ್ಗಳು, ಖಾಸಗಿ ಭೂಮಿ 397918 ಪ್ಲಾಟ್ಗಳು, ಬೆಳೆ ಸಮೀಕ್ಷೆಗೆ ಒಳಪಟ್ಟ ಭೂಮಿ 47553 ಪ್ಲಾಟ್ಗಳು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾದ ಭೂಮಿ 350365 ಪ್ಲಾಟ್ಗಳು, ಇದಕ್ಕೂ ಮೊದಲು ನೋಂದಣಿಯಾದ ಭೂಮಿ 294598 ಪ್ಲಾಟ್ಗಳು ಮತ್ತು 55767 ಪ್ಲಾಟ್ಗಳು ಬಾಕಿ ಇವೆ. ಒಟ್ಟು ಶೇಕಡ 84.08 ಪ್ರತಿಶತ ಸಾಧನೆ ಮಾಡುವ ಮೂಲಕ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಫ್ರೂಟ್ಸ್ ನೋಂದಣಿಗೆ ಸಂಬಂಧಪಟ್ಟಂತೆ ಜಿಲ್ಲೆಯ ರೈತರಿಂದ ಉತ್ತಮವಾದ ಸ್ಪಂದನೆ ದೊರೆತಿದೆ. ನಿಗದಿತ ಗುರಿ ತಲುಪಿರುವುದು. ನಿಜಕ್ಕೂ ಸಂತೋಷದ ಸಂಗತಿ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ ಬರಗಾಲದ ಪರಿಹಾರವನ್ನು ರೈತರಿಗೆ ಫ್ರೂಟ್ಸ್ ತಂತ್ರಾಂದ ನೋಂದಣಿ ಆಧರಿಸಿಯೇ ನೀಡುತ್ತದೆ. ಆದ್ದರಿಂದ FRUITS ತಂತ್ರಾಂಶದಲ್ಲಿ ರೈತರ ಮಾಹಿತಿಯನ್ನು ದಾಖಲೀಕರಣ ಕಡ್ಡಾಯವಾಗಿದೆ. ಆಧಾರ್ ಸಂಖ್ಯೆಯನ್ನು ಬಳಸಿ ಫ್ರೂಟ್ಸ್ ಐಡಿಯನ್ನು ಪಡೆಯಬಹುದು. ಸರ್ಕಾರದ ಇಲಾಖೆಗಳಾದ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ, ಪಶು ವೈದ್ಯಕೀಯ ಮತ್ತು ಬ್ಯಾಂಕುಗಳಲ್ಲಿ ಈ ಐಡಿಯನ್ನು ಬಳಸಿಕೊಂಡು ಸೌಲಭ್ಯ, ಸವಲತ್ತುಗಳನ್ನು ನೀಡಲಾಗುತ್ತದೆ. ಬರ ಪರಿಹಾರ, ಬೆಳೆ ವಿಮೆ ಮತ್ತು ಬ್ಯಾಂಕ್ ಸಾಲ ಹಾಗೂ ಮತ್ತಿತರ ಯೋಜನೆಗಳಿಗೂ ಫ್ರೂಟ್ಸ್ ಐಡಿಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ರೈತರು ಹತ್ತಿರದ ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಐಡಿಯನ್ನು ಪಡೆಯಬಹುದು. ಫ್ರೂಟ್ಸ್ ಐಡಿ ಪಡೆಯಲು ಅಗತ್ಯವಿರುವ ದಾಖಲಾತಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ರೈತರ ಹೆಸರಿನಲ್ಲಿರುವ ಎಲ್ಲಾ ಪಹಣಿಗಳು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ. ಈಗಾಗಲೇ ಫ್ರೂಟ್ಸ್ ಐಡಿಯನ್ನು ಪಡೆದಿರುವ ರೈತರು ತಮ್ಮ ಎಲ್ಲಾ ಪಹಣಿಗಳು ಸದರಿ ಐಡಿಯೊಂದಿಗೆ ಜೋಡಣೆಯಾಗಿದೆಯೇ? ಎಂದು ಪರೀಕ್ಷಿಸಿಕೊಳ್ಳಲು ಸಹ ಮನವಿ ಮಾಡಲಾಗಿದೆ.