ಅಹಮದಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳ ಜನರು ಅಯೋಧ್ಯೆಗೆ ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಅಹಮದಾಬಾದ್ನ ಸಂಸ್ಥೆಯೊಂದು ದೇಗುಲಕ್ಕೆ ಉಡುಗೊರೆಯಾಗಿ ನೀಡಲೆಂದು ಮೆಗಾ ಡ್ರಮ್ ಅನ್ನು ಸಿದ್ಧಪಡಿಸಿದೆ.
ಅಖಿಲ ಭಾರತ ದಗ್ಬರ್ ಸಮಾಜ ತಯಾರಿಸಿದ ಈ ವಿಶೇಷ ಡ್ರಮ್ ಬರೋಬ್ಬರಿ 450 ಕೆ.ಜಿ ತೂಗುತ್ತದೆ. ಇದನ್ನು 2024 ರ ಜನವರಿ 22 ರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಗೆ ತಲುಪಿಸುವ ಪ್ಲ್ಯಾನ್ ಕೂಡ ನಡೆಯುತ್ತಿದೆ. ಈ ಡ್ರಮ್ ಅಥವಾ ನಗಾರಿಯನ್ನು ಕೊಂಡೊಯ್ಯಲು ಸಂಸ್ಥೆಯು ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದು, ಅದಕ್ಕಾಗಿಯೇ 700 ಕೆ.ಜಿ ತೂಕದ ವಿಶೇಷವಾದ ರಥವೊಂದನ್ನು ಕೂಡ ರೆಡಿ ಮಾಡುತ್ತಿದೆ.
ಅಹಮದಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳ ಜನರು ಅಯೋಧ್ಯೆಗೆ ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಅಹಮದಾಬಾದ್ನ ಸಂಸ್ಥೆಯೊಂದು ದೇಗುಲಕ್ಕೆ ಉಡುಗೊರೆಯಾಗಿ ನೀಡಲೆಂದು ಮೆಗಾ ಡ್ರಮ್ (ದೊಡ್ಡ ನಗಾರಿ) ಅನ್ನು ಸಿದ್ಧಪಡಿಸಿದೆ.