ದಕ್ಷಿಣ ಕೊರಿಯಾ: ಮನುಷ್ಯ ಮತ್ತು ವಸ್ತುವಿನ ನಡುವಿನ ವ್ಯತ್ಯಾಸವನ್ನು ಪತ್ತೆ ಮಾಡುವಲ್ಲಿ ವಿಫಲವಾದ ರೋಬಾಟ್, ವ್ಯಕ್ತಿಯನ್ನು ಜಜ್ಜಿ ಸಾಯಿಸಿದ ಘಟನೆ ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ. ವ್ಯಕ್ತಿಯು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ತರಕಾರಿ ಬಾಕ್ಸ್ ಹಾಗೂ ಆತನ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ರೋಬಾಟ್ ಸಂಪೂರ್ಣವಾಗಿ ವಿಫಲವಾಗಿದೆ. ಮೆಣಸು ತುಂಬಿದ್ದ ಪೆಟ್ಟಿಗೆಗಳನ್ನು ಕಟ್ಟಿಗೆ ಪಟ್ಟಿಗಳ ಮೇಲೆ ಇರಿಸುವಂಥ ಜವಾಬ್ದಾರಿಗಳನ್ನು ನೀಡಲಾಗಿತ್ತು.
ಆದರೆ, ಈ ವೇಳೆ ವ್ಯಕ್ತಿ ಹಾಗೂ ತರಕಾರಿ ಬುಟ್ಟಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ರೋಬಾಟ್ ವಿಫಲವಾಗಿದ್ದು, ವ್ಯಕ್ತಿಯನ್ನು ಜಜ್ಜಿ ಸಾಯಿಸಿದೆ. ರೋಬಾಟ್ ಈ ಹಂತದಲ್ಲಿ ಸಂಪೂರ್ಣ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿತು. ತರಕಾರಿ ಬುಟ್ಟಿ ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಹಿಡಿದುಕೊಂಡ ರೋಬಾಟ್ ಆತನನ್ನು ಕನ್ವೇನರ್ ಬೆಲ್ಟ್ಗೆ ಆತನ ಮುಖ ಹಾಗೂ ಎದೆಯ ಭಾಗವನ್ನು ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿಯೇ ಸಾವು ಕಂಡಿದ್ದಾನೆ ಎಂದು ದಕ್ಷಿಣ ಕೊರಿಯಾದ ನ್ಯೂಸ್ ಏಜೆನ್ಸಿ ತಿಳಿಸಿದೆ.