ಬೆಂಗಳೂರು:– ನಗರದ ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸ ನಗರದಲ್ಲಿ ಭಾನುವಾರ ರಾತ್ರಿ ಯುವಕನ ಕೊಲೆಯಾಗಿದೆ. ಬನಶಂಕರಿ ಮೂಲದ ವಿಜಯ(21)ಹತ್ಯೆಯಾದ ಯುವಕ. ಆತನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.
ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ವಿಜಯ್ ಅವರನ್ನು ಸ್ನೇಹಿತರೇ ಹತ್ಯೆಯಾಗಿರುವ ಶಂಕೆ ಇದೆ. ಅವರೆಲ್ಲ ಸೇರಿ ವಿಜಯ್ನನ್ನು ಕೊಂದು ಶ್ರೀನಿವಾಸ್ ನಗರ ಬಸ್ ನಿಲ್ದಾಣದ ಮುಂದೆ ಬಿಸಾಕಿ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.