ಪಶ್ಚಿಮ ಜಪಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ. ಭಾರೀ ಸಾವು ನೋವುಗಳ ಆತಂಕ ಎದುರಾಗಿದ್ದು, ಈ ಬೆನ್ನಲ್ಲೇ ಜಪಾನ್ ಕರಾವಳಿ ಭಾಗದಲ್ಲಿ ಭಾರೀ ಸುನಾಮಿ ಎಳುವ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಜೀವ ಹಾನಿಯಾದ ವರದಿಯಾಗಿಲ್ಲ. ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ನೀಡಿದ ಮಾಹಿತಿ ಪ್ರಕಾರ.. ಭೂಕಂಪವು ಇಶಿಕಾವಾ (Ishikawa) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪ ಆಗಿದೆ. ಅದರ ತೀವ್ರತೆ 7.4 ರಷ್ಟಿದೆ ಎಂದು ತಿಳಿಸಿದೆ.
ದೊಡ್ಡ ದೊಡ್ಡ ಬಿಲ್ಡಿಂಗ್ನಿಂದ ಜನರು ಆಚೆ ಬರಬೇಕು. ಕರಾವಳಿ ಪ್ರದೇಶದಿಂದ ಸುರಕ್ಷಿತ ಸ್ಥಳಗಿಳಿಗೆ ಬರಬೇಕು. ರಕ್ಷಣಾ ಪಡೆ ಕೂಡಲೇ ಸಿದ್ಧರಾಗಬೇಕು ಎಂದು ಡಂಗೂರ ಸಾರಲಾಗಿದೆ. ಟೋಕಿಯೋ, ಕಾಂಟೋ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪದ ಅನುಭವ ಆಗಿದೆ.