ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರುವಲ್ಲಿ ಸಾಧ್ಯವಾಯಿತು. ಹೀಗಾಗಿ ಮೋದಿಯವರ ಮೇಲೆ ನಮಗೆ ವಿಶೇಷ ಗೌರವ ಇದ್ದು, ನಿಜಕ್ಕೂ ನಾವು ಹೆಮ್ಮೆಪಡುತ್ತೇವೆ ಎಂದು ಮಾರಿಷಸ್ ಸಂಸದ ಮಹೇಂದ್ ಗಂಗಾಪ್ರಸಾದ್ ಹೇಳಿದ್ದಾರೆ.
2024ರ ಜನವರಿ 22 ರಂದು ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಿದ್ದೇವೆ. ಇಂದು ಭಗವಾನ್ ರಾಮನು ಜನಿಸಿದ ಸ್ಥಳದಲ್ಲಿ ತನ್ನ ದೇವಾಲಯವನ್ನು ಹೊಂದಿ ದ್ದಾನೆ. ಈ ಸಮಯದಲ್ಲಿ ಭಾರತದಲ್ಲಿರಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮಲ್ಲಿ ಹೆಚ್ಚಿನ ವರಿಗೆ ಊಹಿಸಲೂ ಸಾಧ್ಯವಿಲ್ಲ ಅಷ್ಟೊಂದು ಭಾರತದ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಚಿತ್ರಣವನ್ನು ಪರಿವರ್ತಿಸಿದ್ದಾರೆ. ಈ ಮೂಲಕ ಇಂದು ಇಡೀ ವಿಶ್ವದ ಜನ ಭಾರತದತ್ತ ತಿರುಗಿ ನೋಡುತ್ತಿದ್ದಾರೆ. ಮೋದಿಯವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಈ ನವ ಭಾರತ ಸಾಧ್ಯವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಅಧಿಕಾರಾವಧಿಯಲ್ಲಿ ಭಾರತವು ಇಂದಿನಂತೆ ಮುಂದೆಯೂ ಉಜ್ವಲ ಭವಿಷ್ಯವನ್ನು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.