ಬೆಂಗಳೂರು: ಹೊಸವರ್ಷಾಚರಣೆಯ ಪಾರ್ಟಿಗೆ ಅಂತ ಹೋಗಿದ್ದ ಯುವಕನೊಬ್ಬ ಮಧ್ಯರಾತ್ರಿ ನಡುರಸ್ತೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದ… ಇನ್ನೋಂದು ಕಡೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನೆಡೆದಿದೆ..ಈ ಎರಡೂ ಘಟನೆಗಳ ಡಿಟೇಲ್ಸ್ ಇಲ್ಲಿದೆ.ನೋಡಿ.
ಕಳೆದ ರಾತ್ರಿ ಇಡೀ ಬೆಂಗಳೂರು ಹೊಸ ವರ್ಷದ ಸಂಭ್ರಮದಲ್ಲಿದ್ದು. ಪಾರ್ಟಿ, ಡ್ಯಾನ್ಸ್ ಅಂತ ಜನ ಸಡಗರದಲ್ಲಿ ಮೈಮರೆತಿದ್ರು. ಆದ್ರೆ ಇಂತದ್ದೆ ಪಾರ್ಟಿಗೆ ಗೆಳೆಯರ ಜೊತೆ ಮನೆ ಬಿಟ್ಟಿದ್ದ 21 ವರ್ಷದ ಯುವಕ ಮಧ್ಯರಾತ್ರಿ ನಡುರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದ.
ಆತ ಮನೆಗೆ ಒಬ್ಬನೇ ಮಗ.. ತಂದೆಯಿಲ್ಲದ ಆ ಮಗನಿಗೆ ತಾಯಿ, ತಾಯಿಗೆ ಮಗನೇ ಆಧಾರ ಆಗಿದ್ರು. ಆದ್ರೆ ಫ್ರೆಂಡ್ಸ್ ಜೊತೆ ಪಾರ್ಟಿಗೆ ಅಂತ ಸಂಜೆ ಮನೆಬಿಟ್ಟ ಆದ್ರೆ ವಾಪಸ್ ಬಂದಿದ್ದು ಹೆಣವಾಗಿ..ಯೆಸ್. ಬನಶಂಕರಿ ನಿವಾಸಿಯಾದ ಮನೋಜ್ ಎಂಬಾತನೇ ಕೊಲೆಯಾಗಿರೋ ಯುವಕ.. ಆದರೆ ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗಿ ಪೋಲಿ ಪುಂಡರ ಸಹವಾಸ ಮಾಡ್ಕೊಂಡಿದ್ದ ಮನೋಜ್ ಗೆ ಇಂತ ಸಹವಾಸವೇ ಮುಳುವಾಗಿದೆ. ನಿನ್ನೆ ಸಂಜೆ ನ್ಯೂ ಇಯರ್ ಸೆಲೆಬ್ರೆಷನ್ ಇದೆ, ಪ್ರೆಂಡ್ಸ್ ಬರ್ತಡೇ ಅಂತ ಮನೆ ಬಿಟ್ಟಿದ್ದ ಮನೋಜ್, ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ. ಆದ್ರೆ ಪಾರ್ಟಿಯಲ್ಲಿ ಅದೇನಾಯ್ತೋ ಏನೋ, ಎಲ್ಲರೂ ಎಣ್ಣೆ ಹೊಡೆದು ಆಟೋದಲ್ಲಿ ಬರೋವಾಗ ಆಟೋ ಓಡಿಸುತ್ತಿದ್ದ ಸ್ನೇಹಿತನೇ ಮನೋಜ್ ಎದೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಹೆಣವನ್ನ ಶ್ರೀನಿವಾಸನಗರ ಬಸ್ ನಿಲ್ದಾಣದ ಎದುರಿನ ಈ ಜಾಗದಲ್ಲಿ ಎಸೆದು ಹೋಗಿದ್ದಾರೆ.
ನಡುರಸ್ತೆಯಲ್ಲಿ ಹೆಣ ಬಿದ್ದಿರೋದನ್ನ ನೋಡಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಬಳಿಕ ಸ್ಥಳಕ್ಕೆ ಬಂದ ಹನುಮಂತನಗರ ಠಾಣಾ ಪೊಲೀಸರು ಶವವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಮನೋಜ್ ಪೋಷಕರಿಗೆ ವಿಚಾರ ಮಟ್ಟಿಸಿದ್ರು. ಬೆಳಿಗ್ಗೆ ಕಿಮ್ಸ್ ಆಸ್ಪತ್ರೆ ಶವಗಾರದ ಬಳಿ ಬಂದ ಮನೋಜ್ ತಾಯಿ & ಸಂಬಂಧಿಕರು ಮಗನ ಶವ ಕಂಡು ಕಣ್ಣೀರಾಗಿದ್ರು.
ಮನೆಗೆ ಒಬ್ಬನೇ ಮಗನಾಗಿದ್ದ ಮನೋಜ್ಗೆ ತಂದೆ ಇರಲಿಲ್ಲ. ತಾಯಿಗೆ ಮಗ, ಮಗನಿಗೆ ತಾಯಿಯೇ ಆಧಾರ ಆಗಿದ್ರು. ಆದ್ರೆ ಮನೋಜ್ ಕೊಲೆ ಆ ತಾಯಿಯನ್ನ ದಿಕ್ಕೆಡಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಹಂತಕರಿಗೆ ಬಲೆ ಬೀಸಿರೋ ಹನುಮಂತನಗರ ಠಾಣೆ ಪೊಲೀಸರು, ಕೊಲೆಗೆ ನಿಖರ ಕಾರಣವೇನು ಅನ್ನೋದನ್ನ ಪತ್ತೆ ಮಾಡ್ತಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಜನ ಹೊಸವರ್ಷಾಚರಣೆ ಸಂಭ್ರಮದಲ್ಲಿರುವಾಗಲೇ ಇತ್ತ ವಿದ್ಯಾರ್ಥಿನಿಯೋರ್ವಳು ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸುಧಾಮನಗರದಲ್ಲಿ ನಡೆದಿದೆ.21 ವರ್ಷದ ವರ್ಷಿಣಿ ಆತ್ಮಹತ್ಯೆಗೆ ಶರಣಾದ ಯುವತಿ. ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಾಂಗ ಮಾಡುತ್ತಿದ್ದ ಯುವತಿ, ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದಳು.ಆದರೆ ಇದಕ್ಕಿದ್ದಂತೆ ಮಗಳು ಹೀಗೆ ಇದ್ದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪೋಷಕರು ಶಾಕ್ಗೆ ಒಳಗಾಗಿದ್ದಾರೆ.
ಒಟ್ಟಿನಲ್ಲಿ ಹೊಸವರ್ಷದಲ್ಲಿ ಯುವಕನ್ನನು ಕೊಲೆಮಾಡಿರುವುದ ಹಾಗು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ