ಅದಾನಿ-ಹಿಂಡೆನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇವತ್ತು ಮಹತ್ವದ ತೀರ್ಪು ಪ್ರಕಟಿಸಿದ್ದು, ತನಿಖೆಯನ್ನು SITಗೆ ನೀಡಲು ನಿರಾಕರಿಸಿದೆ. ಈಗಾಗಲೇ ತನಿಖೆ ನಡೆಸ್ತಿರುವ SEBIಗೆ ವಿಚಾರಣೆಯನ್ನು ಕಂಟಿನ್ಯೂ ಮಾಡುವಂತೆ ಸೂಚಿಸಿದೆ. ಈ ಮೂಲಕ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ.
ಸೆಬಿಗೆ (Securities and Exchange Board of India) ಆರೋಪ ಪ್ರಕರಣ ವಿಚಾರಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಈಗಾಗಲೇ 24 ಪ್ರಕರಣಗಳ ಪೈಕಿ 22 ತನಿಖೆ ಪೂರ್ಣಗೊಂಡಿದೆ. ಉಳಿದ 2 ಪ್ರಕರಣಗಳ ತನಿಖೆಗೆ ಸುಪ್ರೀಂ ಕೋರ್ಟ್ 3 ತಿಂಗಳ ಕಾಲಾವಕಾಶ ನೀಡಿದೆ. ಇಲ್ಲಿಯವರೆಗೆ ಸೆಬಿ ನಡೆಸಿರುವ ತನಿಖೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದಿರುವ ಕೋರ್ಟ್, ಪ್ರಶಾಂತ್ ಭೂಷಣ್ ಸೇರಿ ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಕೋರ್ಟ್ ಹೇಳಿದ್ದೇನು..?
ಅದಾನಿ ವಿರುದ್ಧದ ಪ್ರಕರಣವನ್ನು ಸೆಬಿ ತನಿಖೆ ನಡೆಸುತ್ತಿದೆ. ತನಿಖೆ ವೇಳೆ ಎಫ್ಪಿಐ ( Foreign Portfolio Investment) ನಿಯಮಗಳಿಗೆ ಸಂಬಂಧಿಸಿ ಯಾವುದೇ ಅಕ್ರಮ ಕಂಡುಬಂದಿಲ್ಲ. ಸೆಬಿಯ ಲಿಮಿಟೆಟ್ ಚೌಕಟ್ಟನ್ನು ಮಧ್ಯಪ್ರವೇಶಿಸಲು ಕೋರ್ಟ್ಗೆ ಸೀಮಿತ ಅಧಿಕಾರ ಇದೆ. ನ್ಯಾಯಾಲಯವು ಸೆಬಿಯ ಅಧಿಕಾರ ವ್ಯಾಪ್ತಿಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಸೆಬಿ ತನಿಖಾ ನಿಯಮಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಸೆಬಿ ಬದಲಿಗೆ ಎಸ್ಐಟಿಗೆ ಹಸ್ತಾಂತರಿಸಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಧ್ಯಮ ವರದಿಗಳು, ಸುದ್ದಿ ಪ್ರಕಟಣೆಗಳ ಆಧಾರದ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ. ಅದಾನಿ ಪ್ರಕರಣವನ್ನು ವರ್ಗಾಯಿಸಲು ಎಸ್ಐಟಿಗೆ ಯಾವುದೇ ಆಧಾರ ಸಿಕ್ಕಿಲ್ಲ ಎಂದಿದೆ.