ಆಪಲ್ ಬೀಟ್ರೂಟ್ ಕ್ಯಾರೆಟ್ ಮಿಶ್ರಿತ ಜ್ಯೂಸನ್ನು ಎಬಿಸಿ ಜ್ಯೂಸ್ ಎನ್ನಲಾಗುತ್ತದೆ . ಸಾಕಷ್ಟು ವಿಟಮಿನ್ಸ್ ಮತ್ತು ಪೋಷಕಾಂಶಗಳು ಹೇರಳವಾಗಿರುವ ಈ ರಸ ದೇಹಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಹೆಚ್ಚು ಪೂರಕ ಎನಿಸಿದೆ
ಚರ್ಮವನ್ನು ಪುನಶ್ಚೇತನಗೊಳಿಸುವ ಪರಿಪೂರ್ಣ ನಿಮಿಷ ಕರಣ ಪಾನೀಯವಾಗಿರುವ ಎಬಿಸಿ ಜ್ಯೂಸ್ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ ಉದ್ದ ಹಾಗೂ ಸಮೃದ್ಧ ಕೂದಲು ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆ ಚರ್ಮದ ಶುಷ್ಕತೆಯನ್ನು ತಪ್ಪಿಸುತ್ತದೆ
ಮುಖದ ಮೇಲಿನ ಮೊಡವೆ ಕಲೆಗಳನ್ನು ನಿವಾರಿಸಿ ಚರ್ಮದ ಒಳಗಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಕೂಡ ಚರ್ಮದ ಕಾಂತಿಯನ್ನು ಹೆಚ್ಚಿಸುವ ಮತ್ತು ಬಿಸಿಲಿನಿಂದ ಚರ್ಮನು ರಕ್ಷಿಸುವ ಶಕ್ತಿ ಹೊಂದಿದೆ