ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಗೆ ದಿನಗಣನೆ ಶುರುವಾಗಿದೆ. ಸಹಸ್ರಾರು ಹಿಂದೂಗಳ ಬಹುದಿನಗಳ ಕನಸು ನನಸಾಗುತ್ತಿದೆ. ಈ ಹೊತ್ತಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಪಶಕುನದ ಮಾತಾಡಿದ್ದಾರೆ. ರಾಮ ಮಂದಿರ ಉದ್ಘಾಟನೆ ವೇಳೆ ಗೋಧ್ರಾ ರೀತಿ ಹತ್ಯಾಕಾಂಡ ನಡೆಯುತ್ತೆ ಅಂತ ದೇಶದಲ್ಲಿ ಭೀತಿ ಹುಟ್ಟಿಸಿದ್ದಾರೆ.
2002ರಲ್ಲಿ ಗೋಧ್ರಾ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಗುಜರಾತ್ನ ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ್ದ ಕೋಮುಗಲಭೆ ಭಾರತದಲ್ಲಿ ದ್ವೇಷದ ಕಿಚ್ಚು ಹಚ್ಚಿತ್ತು. ಇದೀಗ ರಾಮಮಂದಿರ ಉದ್ಘಾಟನೆ ಹೊತ್ತಲ್ಲಿ ಇಂತಹದ್ದೇ ಘಟನೆ ದೇಶದಲ್ಲಿ ನಡೆಯುತ್ತೆ ಎಂಬ ಮಾತನ್ನಾಡಿ ಬಿ.ಕೆ. ಹರಿಪ್ರಸಾದ್ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದ್ದಾರೆ.
ಬಿ.ಕೆ. ಹರಿಪ್ರಸಾದ್ ಇತ್ತೀಚೆಗೆ ಹಲವು ವಿವಾದಗಳನ್ನ ಮೈಮೇಲೆ ಎಳೆದುಕೊಳ್ತಿದ್ದಾರೆ. ಇರಲಾರದೆ ಇಲ್ಲಸಲ್ಲದನ್ನ ಮಾತನಾಡಿ ಕೇಸರಿ ಸೇನೆಯ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ. ಇದೀಗ ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಸಂಬದ್ದ ಮಾತುಗಳನ್ನಾಡಿ ಆತಂಕ ಹುಟ್ಟಿಸಿದ್ದಾರೆ. ಮರ್ಯಾದಾ ಪುರುಷೋತ್ತಮನ ಆಸ್ಥಾನ ಲೋಕಾರ್ಪಣೆ ಹೊತ್ತಲ್ಲಿ ಗೋಧ್ರಾ ಹತ್ಯಾಕಾಂಡದ ಸಂಗತಿ ನೆನಪಿಸಿದ್ದಾರೆ. ಇದೇ ರೀತಿ ದುರಂತ ಮತ್ತೊಮ್ಮೆ ಏನಾದ್ರೂ ಆಗಬಹುದು ಅಂತ ಹರಿಪ್ರಸಾದ್ ಅಪಶಕುನದ ಮಾತನ್ನಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬೆಂಕಿ ಹಚ್ಚುವ ಮಾತಿಗೆ ಕೇಸರಿ ಸೇನೆ ಕಿಡಿಕಾರಿದೆ. ಗೋಧ್ರಾ ರೀತಿಯ ಹತ್ಯಾಕಾಂಡ ನಡೆದ್ರೆ ಅದಕ್ಕೆ ಹರಿಪ್ರಸಾದ್ ನೇರ ಹೊಣೆ. ಅವರನ್ನ ಈ ಕೂಡಲೇ ಬಂಧಿಸಬೇಕು ಅಂತ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಗ್ರಹಿಸಿದ್ದಾರೆ. ಇತ್ತ ನಿಮ್ಮ ರಾಜಕೀಯ ಪಿತೂರಿಯನ್ನ ಸಿಎಂ ಬಳಿ ಇಟ್ಟುಕೊಳ್ಳಿ ಅಂತ ಮಾಜಿ ಸಚಿವ ಸಿ.ಎನ್ ಅಶ್ವತ್ಥನಾರಾಯಣ ಗುಡುಗಿದ್ದಾರೆ. ಮತ್ತೊಂದೆಡೆ ಹರಿಪ್ರಸಾದ್ ಹೇಳಿಕೆ ಕಾಂಗ್ರೆಸ್ನ ನೀಚ ಬುದ್ಧಿ ತೋರಿಸ್ತಿದೆ ಅಂತ ಕೇಂದ್ರ ಸಚಿವ ನಾರಾಯಣ ಸ್ವಾಮಿ ಟೀಕಿಸಿದ್ದಾರೆ.