ಬೆಂಗಳೂರು: ಸ್ವಂತ ಮಗಳನನ್ನೇ ಸುಪಾರಿ ನೀಡಿ ಕಿಡ್ನಾಪ್ ಮಾಡಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಾಸಿಂ ಕಿಡ್ನಾಪ್ ಮಾಡಿದ ಆರೋಪಿ, ಐಶಾ ಸುಫಾರಿ ನೀಡಿದ ತಾಯಿ, ತನ್ನ ಮೂರು ವರ್ಷದ ಮಗಳನ್ನು ಕಿಡ್ನಾಪ್ ಮಾಡುವಂತೆ ಸೋಫಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಾಸಿಂ ಗೆ ಒಂದು ಲಕ್ಷ ನೀಡಿ ಮಗುವಿನ ತಾಯಿ ಐಶಾ ಸುಪಾರಿ ನೀಡಿದ್ದಳು, ಇದರಂತೆ ಡಿಸೆಂಬರ್ 28 ರಂದು ಮಧ್ಯಾಹ್ನ ಆರೋಪಿ ವಾಸಿಂ, ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಮಗುವನ್ನು ಅಪಹರಣ ಮಾಡಿದ್ದ.
ಮಗಳ ಕಣ್ಮರೆಯಿಂದಾಗಿ ತಂದೆ ಶಫಿವುಲ್ಲಾ ಕಂಗಾಲಾಗಿದ್ದು ಮಗಳಿಗಾಗಿ ಊರುರು ಅಲೆದು ಬಳಿಕ ಬನಶಂಕರಿ ಪೊಲೀಶ್ ಠಾಣೆಯಲ್ಲಿ ದೂರು ನೀಡಿದ್ದಾರೆ.