ಚಿಕ್ಕಮಗಳೂರು: ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ನಾಯಕರು ನನ್ನನ್ನು ಬಂಧಿಸಿ ಅಭಿಯಾನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಟಿ ರವಿಯವರು ನನ್ನನ್ನು ಬಂಧಿಸಿ ಎಂದು ಚಿಕ್ಕಮಗಳೂರು ಠಾಣೆಗೆ ಹೋಗಿ ಧರಣಿ ಕುಳಿತಿದ್ದರು.
ಮಾಜಿ ಸಚಿವ ಸಿಟಿ ರವಿಯವರು ಪೊಲೀಸ್ ಠಾಣೆ ಮುಂದೆ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ ನನ್ನನ್ನು ಬಂಧಿಸಿ ಎನ್ನುವ ಫಲಕ ಹಿಡಿದುಕೊಂಡು ಕುಳಿತ್ತಿದ್ದರು. ಈ ವೇಳೆ ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಈ ವಾಗ್ವಾದ ಅತಿರೇಕಕ್ಕೆ ತಿರುಗಿ ಪೊಲೀಸರು ಮತ್ತು ಕಾರ್ಯಕರ್ತರು ಪರಸ್ಪರ ನೂಕಾಟ- ತಳ್ಳಾಟ ಮಾಡಿದ್ದಾರೆ. ಪೊಲೀಸ್ ಠಾಣೆ ಒಳ ಹೋಗಿದ್ದ ಕಾರ್ಯಕರ್ತರನ್ನು ಪೊಲೀಸರು ಹೊರ ಹಾಕಿದ್ದಾರೆ. ಕೆಲ ಕಾಲ ಠಾಣೆ ಮುಂದೆ ಪ್ರತಿಭಟನೆ ಹಾಗೇ ನಿರಂತರವಾಗಿತ್ತು.